ಇರಾನ್ ಇಸ್ರೇಲ್ ಬಿಕ್ಕಟ್ಟು ಇನ್ನಷ್ಟು ತೀವ್ರ ; ಹುಷಾರು, ಈ ಮೊದಲು ಉಪಯೋಗಿಸದ ಆಯುಧ ಬಳಸುತ್ತೇವೆ, ಇರಾನ್ ಎಚ್ಚರಿಕೆ

Iran–Israel Conflict : ಇರಾನ್ ದಾಳಿಗೆ ಪ್ರತಿಯಾಗಿ ಕ್ರಮ ಕೈಗೊಳ್ಳಲು ನಾವು ಸಿದ್ದರಾಗಿದ್ದೇವೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೂಚನೆಗಾಗಿ ನಾವು ಕಾಯುತ್ತಿದ್ದೇವೆ

Iran Israel Conflict ಇರಾನ್ ಮತ್ತು ಇಸ್ರೇಲ್ ಬಿಕ್ಕಟ್ಟು ಇನ್ನಷ್ಟೂ ತೀವ್ರಗೊಂಡಿದೆ. ಇರಾನ್ ಮೇಲೆ ಸೇಡು ತೀರಿಸಿಕೊಳ್ಳಲು ನಾವು ಸಿದ್ದರಾಗಿದ್ದೇವೆ ಎಂದು ಇಸ್ರೇಲ್ ಹೇಳಿದ ಬೆನ್ನಲ್ಲೇ ಇರಾನ್ ಹೊಸ್ ಆಯುಧ ಬಳಸುವ ಎಚ್ಚರಿಕೆಯನ್ನು ಇರಾನ್ ನೀಡಿದೆ.

ಇರಾನ್ ದಾಳಿಗೆ ಪ್ರತಿಯಾಗಿ ಕ್ರಮ ಕೈಗೊಳ್ಳಲು ನಾವು ಸಿದ್ದರಾಗಿದ್ದೇವೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಸೂಚನೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಇಸ್ರೇಲ್ ಇಂತಹ ಕ್ರಮಕ್ಕೆ ಮುಂದಾದರೆ ಒಂದು ಸೆಕೆಂಡ್ ಒಳಗೆ ನಾವು ಪ್ರತಿಕಾರದ ಕ್ರಮ ಕೈಗೊಳ್ಳುತ್ತೇವೆ, ಹಾಗೆ ಇದುವರೆಗೆ ಬಳಸದ ಅತ್ಯಾಧುನಿಕ ಆಯುಧವನ್ನು ಇಸ್ರೇಲ್ ವಿರುದ್ಧ ಬಳಸುತ್ತೇವೆ ಎಂದು ಇರನ್ ಹೇಳಿದೆ.

Author

error: