ವಾಷಿಂಗ್ಟನ್ : ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಬಹುಮಟ್ಟಿಗೆ ವಿಫಲಗೊಳಿಸಲಾಗಿದೆ. ಅಮೇರಿಕ ಅಧ್ಯಕ್ಷ ಜೋ ಬೈಡನ್ ಈ ವಿಷಯ ತಿಳಿಸಿದ್ದಾರೆ.

ಇಸ್ರೇಲ್ ಗೆ ಅಮೇರಿಕ ನೀಡಿದ ಸಹಾಯದಿಂದ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಲೆಬನಾನ್ ಗಡಿಯಿಂದ್ ಇಸ್ರೇಲ್ ನತ್ತ ಈ ಕ್ಷಿಪಣಿಗಳನ್ನು ಹಾರಿ ಬಿಡಲಾಗಿತ್ತು. ಇದನ್ನು ಇಸ್ರೇಲ್ ನ ದ್ರೋಣ್ ತಡೆಯುವಲ್ಲಿ ಯಶಸ್ವಿಯಾಯಿತು. ಇದಕ್ಕಾಗಿ ಜೋ ಬೈಡನ್ ಇಸ್ರೇಲ್ ಅನ್ನು ಶ್ಲಾಘಿಸಿದ್ದಾರೆ.

ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಾರ್ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ಹಾಗೆ ಅಮೇರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಅವರು ದೂರವಾಣಿಯ ಮೂಲಕ ಮಾತನಾಡಿದ್ದಾರೆ.

.

Author

Leave a Reply

Your email address will not be published. Required fields are marked *