ಆಂಧ್ರ ಮುಖ್ಯಮಂತ್ರಿ ಜಗನ್ ರೆಡ್ಡಿಗೆ ಬಿತ್ತು ಕಲ್ಲು : ಗಾಯಗೊಂಡ ಸಿಎಂಗೆ ಚಿಕಿತ್ಸೆ

Jagan Mohan Reddy: ಚುನಾವಣಾ ಯಾತ್ರೆಯ ವೇಳೆ ಬಸ್‌ ಮೇಲೆ ನಿಂತು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದಾಗ ಜಗನ್‌ರತ್ತ ಎಸೆದ ಹೂಗಳೊಂದಿಗೆ ಕಲ್ಲುಗಳನ್ನೂ ಎಸೆದಿದ್ದಾರೆ

ವಿಜಯವಾಡ : ಚುನಾವಣಾ ರೋಡ್‌ ಶೋ ವೇಳೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಎಡಗಣ್ಣಿನ ಮೇಲ್ಭಾಗದಲ್ಲಿ ತೀವ್ರ ಗಾಯವಾಗಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ.

ವೈಎಸ್‌ಆರ್‌ಸಿಪಿ ವತಿಯಿಂದ “ಮೇಮಂತಾ ಸಿದ್ಧಂ” ಎಂಬ ಚುನಾವಣಾ ಯಾತ್ರೆಯ ವೇಳೆ ಬಸ್‌ ಮೇಲೆ ನಿಂತು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದಾಗ ಜಗನ್‌ರತ್ತ ಎಸೆದ ಹೂಗಳೊಂದಿಗೆ ಕಲ್ಲುಗಳನ್ನೂ ಎಸೆದಿದ್ದಾರೆ. ಕ್ಯಾಟ್‌ ಬಾಲ್ ಮೂಲಕ ಸಿಎಂ ಮೇಲೆ ದಾಳಿ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜಗನ್ ಅವರ ಹಣೆಗೆ ಗಾಯವಾಗುತ್ತಿದ್ದಂತೆ ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಸ್ಪಂದಿಸಿದ್ದು, ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿ ರೋಡ್ ಶೋ ಮುಂದುವರಿಸಿದ್ದಾರೆ. ಸಿಎಂ ಜಗನ್ ಅವರ ಪಕ್ಕದಲ್ಲಿದ್ದ ಶಾಸಕ ವೆಲ್ಲಂಪಳ್ಳಿ ಅವರ ಎಗಣ್ಣಿಗೂ ಗಾಯವಾಗಿದೆ ಎಂದು ವರದಿಯಾದಿದೆ.

Author

error: