ನವದೆಹಲಿ: ಭಾರತದ ಸಂವಿಧಾನವನ್ನು ಈಗ ಸ್ವತಃ ಅಂಬೇಡ್ಕರ್ ಅವರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿ ಎರಡು ದಿನ ಕಳೆದಿಲ್ಲ. ಈಗಾಗಲೇ ಮೋದಿ ಶಿಷ್ಯ ಪಡೆ ಸಂವಿಧಾನವನ್ನು ಬದಲಿಸುವ ಮಾತನಾಡಲು ಪ್ರಾರಂಭಿಸಿದೆ.
ಬಿಜೆಪಿಯ ಮೀರತ್ ಅಭ್ಯರ್ಥಿ ಅರುಣ್ ಗೋವಿಲ್ ಸಂವಿಧಾನದಲ್ಲಿ ಬದಲಾವಣೆ ಆಗಬೇಕು ಎಂದಿದ್ದಾರೆ.
ಈ ಹೇಳಿಕೆಯ ಬಗ್ಗೆ ಬೇರೆ ಬೇರೆ ರಾಜಕೀಯ ಪಕ್ಷಗಳ ನಾಯಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಈ ಅರುಣ್ ಗೋವಿಲ್ ಧಾರಾವಾಹಿ ನಟ. ರಾಮಾಯಣ ಧಾರಾವಾಹಿಯಲ್ಲಿ ರಾಮನಾಗಿ ನಟಿಸಿದವರು. ಈಗ ಸಂವಿಧಾನವನ್ನೇ ಬದಲಿಸುವ ಮಾತನಾಡತೊಡಗಿದ್ದಾರೆ. ಸೋಮವಾರ ಅವರು ಸಂವಿಧನದ ಬದಲಾವಣೆ ಆಡಿದ ಮಾತುಗಳ ವೀಡಿಯೋ ಎಲ್ಲೆಡೆ ಹರಿದಾಡತೊಡಗಿತು. ಈ ವೀಡಿಯೋದಲ್ಲಿ ಅವರು ಸಂವಿಧಾನವನ್ನೇ ಬದಲಿಸುವ ಮಾತನಾಡಿದ್ದರು.
ಇದು ವೈರಲ್ ಆದ ಮೇಲೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸೀಂಗ್ ಕಟುವಾಗಿ ಟೀಕಿಸಿದರು.
ಯಾವುದೇ ಬದಲಾವಣೆ ಎನ್ನುವುದು ಅಭಿವೃದ್ಧಿಯ ಲಕ್ಷಣ. ಈಗ ಕಾಲ ಬದಲಾಗಿದೆ . ಆದ್ದರಿಂದ ಸಂವಿಧಾನ ಬದಲಾದರೆ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಕೆನರಾ ಸಂಸದ ಅನಂತಕುಮಾರ್ ಹೆಗಡೆ ಕೂಡ ಇದೇ ಮಾತು ಹೇಳಿದ್ದರು. ಸಂಘ ಪರಿವಾರದ ಹಲವಾರು ನಾಯಕರು ಸಂವಿಧಾನ ಬದಲಾವಣೆಯ ಮಾತನ್ನು ಆಡುತ್ತಲೇ ಇದ್ದಾರೆ.






