ನವದೆಹಲಿ : ಬಿಜೆಡಿ ಜೊತೆ ಹೊಂದಾಣಿಕೆ ಮಾತುಕತೆ ವಿಫಲವಾಗಿದೆ. ಹೀಗಾಗಿ ಬಿಜೆಪಿಗೆ ಬೇರೆ ದಾರಿ ಇಲ್ಲದಂತಾಗಿದೆ. ಒಡಿಶಾದಲ್ಲಿ ಚುನಾವಣಾ ಪೂರ್ವ ಮೈತ್ರಿಗಾಗಿ ಆಡಳಿತಾರೂಢ ಬಿಜೆಡಿಯೊಂದಿಗೆ ವಾರಗಳ ಕಾಲ ನಡೆದ ಮಾತುಕತೆ ಕೊನೆಗೂ ವಿಫಲವಾಗಿದ್ದು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಭಾರತೀಯ ಜನತಾ ಪಕ್ಷ ಶುಕ್ರವಾರ ಪ್ರಕಟಿಸಿತು.
ಕಳೆದ ಕೆಲವು ದಿನಗಳಿಂದ ಬಿಜು ಜನತಾ ದಳ ಜೊತೆ ಸಂಭಾವ್ಯ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿತ್ತು. ಆದರೆ ಈ ಮಾತುಕತೆ ಸಫಲವಾಗಲಿಲ್ಲ.
ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 21 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು 147 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ.
