ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಈ ಸಂಜೆ ಹೊರಗೆ ಬಂದರು.
ಹನುಮಾನ್ ಆಶೀರ್ವಾದದಿಂದ ಹೊರಗೆ ಬಂದಿದ್ದೇನೆ. ನಾಳೆ ಹನುಮಾನ ದೇವಾಲಯಕ್ಕೆ ಹೋಗಿ ಬಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಕೇಜ್ರಿವಾಲ್ ಜೈಲಿನಿಂದ ಹೊರಕ್ಕೆ ಬಂದಿರುವುದು ಆಮ್ ಆದ್ಮಿ ಪಕ್ಷಕ್ಕೆ ಆನೆ ಬಲ ನೀಡಿದಂತಾಗಿದೆ. ಮುಂದಿನ ೨೦ ದಿನಗಳ ಕಾಲ ಅವರು ಚುನಾವಣಾ ಪ್ರಚಾರ ನಡೆಸಲಿದ್ದಾರೆ. ದೆಹಲಿ, ಪಂಜಾಬ್ ನಲ್ಲಿ ಇದು ಸಾಕಷ್ಟು ಪರಿಣಾಮ ಬೀರಬಹುದು. ಹಾಗೆ ಇಂಡಿಯಾ ಒಕ್ಕೂಟಕ್ಕೂ ಇದರಿಂದ ಲಾಭವಾಗಬಹುದು.
