ಲೈಂಗಿಕ ದೌಅರ್ಜನ್ಯದ ಆರೋಪ ಹೊತ್ತೂ ಆರಾಮಾಗಿ ತಿರುಗಾಡಿಕೊಂಡೇ ಇದ್ದ ಬ್ರಿಜ್ ಭೂಷಣ್ ಮೇಲೆ ಆರೋಪ ಪಟ್ಟಿ ಸಲ್ಲಿಸಲು ಸಾಕಷ್ಟು ಸಾಕ್ಷಾಧಾರಗಳಿವೆ ಎಂದು ದೆಹಲಿ ನ್ಯಾಯಾಲಯ ತಿಳಿಸಿದೆ.
ಬ್ರೀ ಭೂಷಣ್ ಶರಣ್ ಸಿಂಗ್ ಎಂಬ ಈ ವ್ಯಕ್ತಿ ರೆಸಲಿಂಗ್ ಫೆಡರೇಷನ್ ಮುಖ್ಯಸ್ಥರಾಗಿದ್ದವರು. ಇವರ ವಿರುದ್ಧ ಲೈಂಗಿಕ ದೌಅರ್ಜನ್ಯದ ಆರೋಪ ಮಾಡಿದವರು ಮಹಿಳಾ ಕುಸ್ತಿ ಪಟುಗಳು. ಈತನ ಬಂಧನಕ್ಕೆ ಭಾರಿ ಪ್ರತಿಭಟನೆ ನಡೆಯಿತು. ಆದರೆ ಬಿಜೆಪಿ ಸಂಸದನಾಗಿದ್ದ ಈತನನ್ನು ಮುಟ್ಟುವ ಧೈರ್ಯ ಯಾರಿಗೂ ಇರಲಿಲ್ಲ
ಯಾಕೆಂದರೆ ಈತನಿಗೆ ದೊಡ್ದವರ ಆಶೀರ್ವಾದ ಇತ್ತು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲೂ ಆತನಿಗೆ ಬದಲಾಗಿ ಅವನ ಮಗನಿಗೆ ಬಿಜೆಪಿ ಟಿಕೆಟ್ ನೀಡಿದೆ. ಆತ ಅಷ್ಟರಮಟ್ಟಿಗೆ ಪವರ್ ಫುಲ್.
