ನವದೆಹಲಿ : ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಪ್ರಜ್ವಲ್ ಜರ್ಮನಿಯಿಂದ ದುಬೈಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಅವರ ಕಾರ್ಯ ಯೋಜನೆ ಏನು ಮುಂದಿನ ದಾರಿ ಎಲ್ಲಿಗೆ ಎಂಬುದು ಇನ್ನೂ ತಿಳಿದಿಲ್ಲ.
ದುಬೈನಲ್ಲಿ ಇದ್ದೇ ತಮ್ಮ ವಕೀಲರ ಜೊತೆ ಸತತ ಸಂಪರ್ಕದಲ್ಲಿ ಇದ್ದಾರೆ ಎಂಬುದು ಮಾಹಿತಿ. ಮುಂದೇನು ಮಾಡಬೇಕು ಎಂಬ ಕಾನೂನು ತಜ್ಞರ ಜೊತೆ ಅವರು ಸಮಾಲೋಚಿಸುತ್ತಿದ್ದಾರೆ.
ಈಗ ಅವರ ಮುಂದೆ ಕಾನೂನಿನ ದಾರಿ ಬೇರೆ ಇಲ್ಲ. ಎಸ್ ಐ ಟಿ ಪೊಲೀಸರ ಮುಂದೆ ಹಾಜರಗಬೇಕು. ವಿಚಾರಣೆಯನ್ನು ಎದುರಿಸಬೇಕು. ಬಂಧಿಸಿದರೆ ಒಳಗೆ ಹೋಗಬೇಕು ಅಷ್ಟೇ.







