ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಳ್ಳುವಂತೆ ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ಘಟಕದ ನಾಯಕರಿಗೆ ಸೂಚಿಸಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಬಿಟ್ಟು ಬೇರೆ ಯಾರೂ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಕೂಡದು ಎಂದು ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ವರಿಷ್ಠರು ಪ್ರಮುಖವಾಗಿ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಪ್ರಕರಣ ಈ ಹಂತಕ್ಕೆ ಬೆಳೆಯುತ್ತದೆ ಎಂದುಕೊಂಡಿರಲಿಲ್ಲ.
ಪಕ್ಷದ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಪ್ರಜ್ವಲ್ ಅವರ ಅನೈತಿಕ ರಾಸಲೀಲೆ ವಿಚಾರ ಬಿಜೆಪಿ ನಾಯಕರಿಗೂ ಗೊತ್ತಿತ್ತು. ಹೀಗಾಗಿ ಹಾಸನದ ಟಿಕೆಟ್ ಅನ್ಬು ಪ್ರಜ್ವಲ್ ಅವರ ಬದಲಿಗೆ ಬೇರೆಯವರಿಗೆ ನೀಡುವಂತೆಯೂ ಸೂಚಿಸಲಾಗಿತ್ತು. ಆದರೆ ದೇವೇಗೌಡರು ಇದಕ್ಕೆ ಸಿದ್ದರಿರಲಿಲ್ಲ. ಅವರಿಗೆ ಮೊಮ್ಮಗ ಪ್ರಜ್ವಲ್ ಮೇಲೆ ಅಪಾರ ಪ್ರೀತಿ. ಪ್ರಜ್ವಲ್ ಅವರಿಗೆ ಟಿಕೆಟ್ ನೀಡುವಂತೆ ಸೂಚಿಸರು.
ದೇವೇಗೌಡರ ಕುಟುಂಬದಲ್ಲಿ ರೇವಣ್ಣನವರ ಬಗ್ಗೆ ದೇವೇಗೌಡರಿಗೆ ಮತ್ತು ಚೆನ್ನಮ್ಮ ದೇವೇಗೌಡರಿಗೆ ವಿಶೇಷ ಪ್ರೀತಿ. ಕುಮಾರಸ್ವಾಮಿಗಿಂತ ರೇವಣ್ಣ ಹೆಚ್ಚು ಒಳ್ಳೆಯವನು ಜೊತೆಗೆ ದಡ್ಡನೂ ಕೂಡ ಎಂಬುದು ಅವರ ನಂಬಿಕೆ. ಹಾಗೆ ಕುಮಾರಸ್ವಾಮಿಗಿಂತ ಹಿರಿಯ ನಾದ ರೇವಣ್ಣನವರಿಗೆ ಎಲ್ಲೋ ಅನ್ಯಾಯವಾಗಿದೆ ಎಂದು ಅವರು ನಂಬಿಕೊಂಡಿದ್ದಾರೆ. ಹೀಗಾಗಿ ರೇವಣ್ಣನವರ ಬಗ್ಗೆ ಹೆಚ್ಚಿನ ಮಮತೆ ತೋರಿ ಪಜೀತಿಗೆ ಸಿಕ್ಕಿಕೊಂಡ ಹಲವು ಪ್ರಕರಣಗಳು ಉಂಟು,
ಇಲ್ಲಿ ಅದದ್ದೂ ಆದೇ. ದೃತರಾಷ್ಟ್ರ ಪ್ರೀತಿ ದೇವೇಗೌಡರನ್ನು ಮುಳುಗಿಸುತ್ತಿದೆ. ಅವರು ಕಣ್ಣಿದ್ದೂ ಕಣ್ಣು ಕಾಣದಂತೆ ವರ್ತಿಸಬೇಕಾಗಿದೆ. ಜೊತೆಗೆ ಅವರ ಸಾಮ್ರಾಜ್ಯದ ಕಲ್ಲುಗಳು ಉರುಳತೊಡಗಿವೆ.

Author

Leave a Reply

Your email address will not be published. Required fields are marked *