ಕಾವೇರಿ ತವರಿನಲ್ಲಿ ಕಾವೇರಿ ಬತ್ತಿ ಹೋಗಿದ್ದಾಳೆ. ಇದರಿಂದಾಗಿ ಕೊಡಗಿನ ಬಹಳಷ್ಟು ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ನಾಡಿನಲ್ಲಿ ನೀರಿನ ಹಾಹಾಕಾರ.
ಕಳೆದ ಮಳೆಗಾಲದಲ್ಲೂ ಕೊಡಗಿನಲ್ಲಿ ನಿರೀಕ್ಷಿತ ಮಳೆ ಬಿದ್ದಿರಲಿಲ್ಲ. ಕುಶಾಲನಗರದಲ್ಲಿ ಅರ್ಧಕ್ಕಿಂತ ಕಡಿಮೆ ಮಳೆಯಾಗಿತ್ತು. ಹೀಗಾಗಿ ಈ ಬಾರಿ ಬಹು ಬೇಗ ನೀರಿನ ಹಾಹಾಕಾರ ಪ್ರಾರಂಭವಾಗಿದೆ.
ಕಾವೇರಿ ನದಿ ಒಣಗಿ ನಿಂತಿದೆ. ನೀರಿನ ಲಕ್ಷಣವೇ ಇಲ್ಲ. ಅಲ್ಲಲ್ಲಿ ಬಂಡೆ ಕಲ್ಲುಗಳು ಕಾಣುತ್ತಿವೆ. ಹೀಗಾಗಿ ನದಿಯಿಂದ ನೀರು ತಂದು ಬಳಸುವ ಸ್ಥಿತಿಯೇ ಇಲ್ಲ.

Author

Leave a Reply

Your email address will not be published. Required fields are marked *