ಗಗನಕ್ಕೇ ಏರಿದ ಮನೆ ಬಾಡಿಗೆ; ದೇಶದ ಪ್ರಮುಖ ನಗರಗಳಲ್ಲಿ ಪ್ರತಿಶತ 50 ರಷ್ಟು ಹೆಚ್ಚಳ; ಬಾಡಿಗೆದಾರರನ್ನು ಕಾಪಾಡುವವರು ಯಾರು ?

House Rent Increase : ಕೆಲವರು ತಾವು ಇರುವ ಮನೆಗಳನ್ನು ಖಾಲಿ ಮಾಡಿ ಕಡಿಮೆ ಬಾಡಿಗೆ ಮನೆಗೆ ಹೋಗುವ ತಯಾರಿಯಲ್ಲಿದ್ದಾರೆ. ಆದರೆ ಕಡಿಮೆ ಬಾಡಿಗೆ ಮನೆಗಳು ಸಿಗುತ್ತಿಲ್ಲ

ಬೆಂಗಳೂರು : ಚುನಾವಣೆಯ ದಿನಗಳು. ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ರಾಮ ಮನೆ ಬಾಗಿಲೆಗೆ ಬರುತ್ತಿದ್ದಾನೆ. ನೀವು ಆಯೋಧ್ಯಎಗ್ ಹೋಗಿ ರಾಮ ದರ್ಶನ ಮಾಡಿ ಪುನೀತರಾಗಬಹುದು. ಆದರೆ ನಿಮಗೆ ಮನೆ ಬಾಡಿಗೆಯನ್ನೇ ಕೊಡಲು ಸಾಧ್ಯವಾಗದಿದ್ದರೆ ?? ಈಗ ಅಂತಹ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಮುಂಬೈ ನಂತರ ನಗರಗಳಲ್ಲಿ ಮನೆ ಬಾಡಿಗೆ ಪ್ರತಿ ಶತ 50 ರಷ್ಟು ಹೆಚ್ಚಾಗಿದೆ.

ಸಾಧಾರಣವಾಗಿ ಪ್ರತಿ ಶತ 10 ರಷ್ಟು ಮನೆ ಬಾಡಿಗೆ ಹೆಚ್ಚಿಸುವುದು ಸಾಮಾನ್ಯ. ಆದರೆ 2023 ಕ್ಕೆ ಹೋಲಿಸಿದರೆ ಪ್ರಮುಖ ನಗರಗಳಲ್ಲಿ ಮನೆ ಬಾಡಿಗೆ ಪ್ರತಿಶತ 50 ರಷ್ಟು ಹೆಚ್ಚಾಗಿದೆ. ಇದರಿಂದಾಗಿ ದೇಶದಲ್ಲಿ ವಸತಿ ಬಿಕ್ಕಟ್ಟು ಪ್ರಾರಂಭವಾಗಿದೆ.

ಈ ಪರಿಸ್ಥಿತಿಯಲ್ಲಿ ಕೆಲವರು ತಾವು ಇರುವ ಮನೆಗಳನ್ನು ಖಾಲಿ ಮಾಡಿ ಕಡಿಮೆ ಬಾಡಿಗೆ ಮನೆಗೆ ಹೋಗುವ ತಯಾರಿಯಲ್ಲಿದ್ದಾರೆ. ಆದರೆ ಕಡಿಮೆ ಬಾಡಿಗೆ ಮನೆಗಳು ಸಿಗುತ್ತಿಲ್ಲ. ಸಿಕ್ಕರೂ ಸರಿಯಾದ ಸೌಲಭ್ಯಗಳ ಕೊರತೆ.
ಮುಂಬೈನಲ್ಲಿ ಒಳ್ಳೆಯ 3 ಬಿಹೆಚ್ ಕೆ ಮನೆಯ ಬಾಡಿಗೆ ಮಾಸಿಕ 64 ಸಾವಿರ ರೂಪಾಯಿಯಿಂದ 84 ಸಾವಿರ ರೂಪಾಯಿಗೆ ಏರಿದೆ.

ದೇಶದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ನೊಯ್ಡಾ ಮತ್ತು ಗುರು ಗ್ರಾಮಗಳಲ್ಲಿ ವಸತಿ ಸಮಸ್ಯೆ ಉಲ್ಬಣ ಗೊಳ್ಳುತ್ತಿದೆ.

ಮುಂಬೈ ನಗರದಕ್ಕಿ 2 ಬಿಹೆಚ್ ಕೆ ಪ್ಲಾಟ್ ಗೆ ಮಾಸಿಕ ಬಾಡಿಗೆ ಸುಮಾರು 45 ಸಾವಿರ ರೂಪಾಯಿಗಳು. ಕಳೆದ ವರ್ಷಕ್ಕೆ ಹೋಲಿಸಿದರೆ ಬಾಡಿಗೆಯಲ್ಲಿ ಪ್ರತಿಶತ 30 ರಷ್ಟು ಹೆಚ್ಚಳವಾಗಿದೆ.

ಬೆಂಗಳೂರು ಮತ್ತು ನೊಯ್ಡಾ ಪರಿಸ್ಥಿತಿಯೂ ಬೇರಯಾಗಿಲ್ಲ ಈ ಎರಡೂ ನಗರಗಳಲ್ಲಿ ಸರಾಸರಿ ಮನೆ ಬಾಡಿಗೆ 32 ರಿಂದ 38 ಸಾವಿರ ರೂಪಾಯಿಗೆ ಏರಿದೆ. ಇದು ಪ್ರತಿಶತ 25ರಷ್ಟು ಹೆಚ್ಚಳ.

Author

error: