ನವದೆಹಲಿ : ದೇಶದ 102 ಸ್ಥಾನಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಗೆಲುವು ಯಾರ ಪಾಲಿಗೆ ಎನ್ನುವ ಲೆಕ್ಕಾಚಾರ ಈಗ ಪ್ರಾರಂಭವಾಗಿದೆ. ಈ ಎಲ್ಲ ಲೆಕ್ಕಾಚಾರಗಳ ಪ್ರಕಾರ ಎರಡು ಪ್ರಮುಖ ಅಂಶಗಳು ಗಮನಕ್ಕೆ ಬಂದಿವೆ. ಒಂದು ಇಂಡಿಯಾ ಮೈತ್ರಿಕೂಟ ಕಳೆದ ಲೋಕಸಭಾ ಚುನಾವಣೆಗಿಂತ ಹೆಚ್ಚಿನ ಸ್ಠಾನವನ್ನು ಪಡೆಯಲಿದೆ. ಎರಡೂ ಬಿಜೆಪಿ ತೀವ್ರ ರೂಪದ ಸಮಸ್ಯೆ ಎದುರಿಸುತ್ತಿದೆ.
ಬಿಜೆಪಿ ಗೆ ಶಾಕ್ ಆಗುತ್ತಿರುವುದು ದೇಶದ ಒಳಗಿನ ಅಂಡರ್ ಕರೆಂಟ್. ಅದು ಬಿಜೆಪಿಗೆ ವಿರುದ್ಧವಾಗಿದೆ. ದೇಶದ ಜನ ನಿರುದ್ಯೋಗ ಬಡತನದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಬಿಜೆಪಿಯ ರಾಮ ಮಂದಿರ ಯಾಕೋ ಟೇಕ್ ಆಫ್ ಆಗುತ್ತಿಲ್ಲ. ಮೋದಿಯವರ ವರ್ಚಸ್ಸು ಮೊದಲು ಇದ್ದಂತೆ ಇಲ್ಲ.
ಈ ನಡುವೆ ಹಿಂದಿ ಹೃದಯ ಭಾಗದಲ್ಲಿ ಕೆಲವು ಪ್ರಬಲ ಜಾತಿಗಳು ಬಿಜೆಪಿಯ ಬಗ್ಗೆ ಮುನಿಸಿಕೊಂಡಿವೆ. ರಜಪೂತರ ಸಿಟ್ಟು ಕಡಿಮೆಯಾಗುತ್ತಿಲ್ಲ. ಇದಕ್ಕೆ ಮುಲಾಮು ಹಚ್ಚಲು ಬಿಜೆಪಿ ಯತ್ನಿಸುತ್ತಿದ್ದರೂ ರೋಗ ಗುಣವಾಗುತ್ತಿಲ್ಲ. ಬದಲಿಗೆ ಮತ್ತಷ್ಟು ಹೆಚ್ಚುತ್ತಿದೆ. ಬಿಜೆಪಿ ಸರ್ಕಾರ ರೈತ ಚಳವಳಿಯನ್ನು ನಿರ್ವಹಿಸಿದ ರೀತಿಯಿಂದಾಗಿ ಝಾಟರೂ ಮುನಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಬ್ರಾಹ್ಮಣರಿಗೂ ಸಮಾಧಾನ ಇಲ್ಲ.
ಮೊದಲ ಹಂತದಲ್ಲಿ ನಡೆದ 102 ಕ್ಷೇತ್ರಗಳಲ್ಲಿ ತಮಿಳು ನಾಡಿನಲ್ಲಿ ಹೆಚ್ಚಿನ ಲಾಭ ವಾಗುವ ಲಕ್ಷಣ ಕಂಡು ಬರುತ್ತಿಲ್ಲ. ಕಳೆದ ಬಾರಿ ಒಂದು ಸ್ಥಾನವನ್ನೂ ಗೆಲ್ಲದ ರಾಜಸ್ಥಾನದಲ್ಲಿ ಇಂಡೀಯಾ ಮೈತ್ರಿಕೂಟದ ಸ್ಥಿತಿ ಸುಧಾರಿಸಿದೆ. ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಕಾಣುತ್ತಿದೆ.
ಸಂವಿಧಾನ ಬದಲಾವಣೆ ವಿಚಾರ ಮುನ್ನೆಲೆಗೆ ಬಂದು ಪ್ರಧಾನಿ ಮೋದಿ ಅವರೇ ಈ ಬಗ್ಗೆ ವಿವರ ನೀಡಬೇಕಾದ ಸ್ಥಿತಿ ಬಂದಿದ್ದು ಬದಲಾಗುತ್ತಿರುವ ಸ್ಥಿತಿಗೆ ದ್ಯೂತಕ ಎನ್ನಲಾಗುತ್ತಿದೆ.
ಇನ್ನು ಕಾಂಗ್ರೆಸ್ ಮೂಲಗಳ ಪ್ರಕಾರ, ರಾಜಸ್ಥಾನ, ಮಧ್ಯಪ್ರದೇಶ,ಛತ್ತೀಸಗಡ, ಗುಜರಾತ್ ಬಿಹಾರಗಳಲ್ಲೂ ಇಂಡಿಯಾ ಒಕ್ಕೂಟ ಉತ್ತಮ ಸಾಧನೆ ಮಾಡಲಿದೆ.
