ಮಧ್ಯ ಪ್ರಾಚ್ಯದಲ್ಲಿ ವಿಸ್ತರಿಸಿದ ಯುದ್ಧ ; ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ

Israel Iran War News : ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈಗಿನ ಮಾಹಿತಿಯ ಪ್ರಕಾರ ಸುಮಾರು 100 ಕ್ಕೂ ಹೆಚ್ಚು ಕ್ಷಿಪಣಿಗಳು ಇಸ್ರೇಲ್ ನಲ್ಲಿ ಹಾರಿವೆ

ಟೆಹರಾನ್: ಎಲ್ಲರ ನಿರೀಕ್ಷೆಯಂತೆ ಇದು ನಡೆದಿದೆ. ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈಗಿನ ಮಾಹಿತಿಯ ಪ್ರಕಾರ ಸುಮಾರು 100 ಕ್ಕೂ ಹೆಚ್ಚು ಕ್ಷಿಪಣಿಗಳು ಇಸ್ರೇಲ್ ನಲ್ಲಿ ಹಾರಿವೆ. ಇದರಿಂದಾದ ಹಾನಿಯ ಬಗ್ಗೆ ಇನ್ನೂ ಯಾವ ವಿವರಗಳು ಬಂದಿಲ್ಲ.

ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ 6 ತಿಂಗಳು ಮುಗಿಸುತ್ತಿರುವಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಮತ್ತೆ ಯುದ್ಧದ ಕಾರ್ಮೋಡ, ಹಮಾಸ್ ಗೆ ಇರಾನ್ ಬೆಂಬಲ ನೀಡುತ್ತಿದೆ ಎಂಬುದು ಇಸ್ರೇಲ್ ಆರೋಪ. ಜೊತೆಗೆ ಇರಾನ್ ನ ಕೆಲವು ಅಧಿಕಾರಿಗಳ ಹತ್ಯೆಯನ್ನು ಇಸ್ರೇಲ್ ಮಾಡಿತ್ತು. ಇದಕ್ಕೆ ಪ್ರತಿಕಾರ ಮಾಡಲು ಇರಾನ್ ಸಿದ್ದವಾಗಿತ್ತು.

ಎರಡು ದಿನಗಳ ಹಿಂದೆ ಇರಾನ್ ಇಸ್ರೇಲ್ ಮೇಲೆ ದಾಳಿ ಮಾಡಬಹುದು ಎಂದು ಅಮೇರಿಕ ಎಚ್ಚರಿಕೆ ನೀಡಿತ್ತು. ಜೊತೆಗೆ ಇಸ್ರೇಲ್ ಬೆಂಬಲಕ್ಕೆ ತನ್ನ ನೌಕಾ ಪಡೆಯನ್ನು ಕಳುಹಿಸಿತ್ತು.

Author

error: