ಪಂಜಾಬ್ ಕಿಂಗ್ಸ್ ಮಣಿಸಿದ ರಾಜಸ್ಥಾನ ರಾಯಲ್ಸ್ : ಮೂರು ವಿಕೆಟ್ ಗಳ ಭರ್ಜರಿ ಜಯ

IPL Highlights 2024 PBKS vs RR: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು

ಮೊಹಾಲಿ : ಮಹಾರಾಜ ಯಾದವಿಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಮೂರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಅಶುತೋಷ್ ಶರ್ಮಾ 31, ಜಿತೇಶ್ ಶರ್ಮಾ, 29, ಲಿವಿಂಗ್ ಸ್ಟೊನ್ 21 ರನ್ ಗಳಿಸಿದರು. ಉಳಿದಂತೆ ಯಾವ ಆಟಗಾರರು ಮಿಂಚಲಿಲ್ಲ.

ಈ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ ತಂಡ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 39, ತನುಶ್ ಕೊಟಿಯಾನ್ 24, ನಾಯಕ ಸಂಜು ಸ್ಯಾಮ್ಸನ್ 18, ರಿಯಾನ್ ಪರಾಗ್ 23, ಶಿಮ್ರಾನ್ ಹೆಟ್ಮಾಯರ್ ಅಜೇಯ 27 ರನ್ ಗಳಿಸುವುದರೊಂದಿಗೆ 19.5 ಓವರ್ ಗಳಲ್ಲಿ 7ವಿಕೆಟ್ ನಷ್ಟಕ್ಕೆ 152 ರನ್ ಗಳಿಸುವುದರೊಂದಿಗೆ ಗೆಲುವು ಸಾಧಿಸಿತು. ಶಿಮ್ರಾನ್ ಹೆಟ್ಮೆಯಾರ್ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Author

error: