ಅದು ಕೊನೆಯ ಓವರ್. ಅವರಿಗಾಗಿ ಇಡೀ ಕ್ರೀಡಾಂಗಣ ಕಾಯುತ್ತಿತ್ತು. ಒಂದು ಬಾಲ್ ಮುಗಿಯಿತು. ಒಂದು ವಿಕೆಟ್ ಬಿತ್ತು.. ಆಗ ಬಂದವರು ಅವರೇ. ನಿಜ ಅವರೇ ಮಹೇಂದ್ರ ಸಿಂಗ್ ದೋನಿ. ಮೂರು ಸಿಕ್ಸರ್ ಗಳು. 20 ರನ್. ಚೆನ್ನೈ ಸೂಪರ್ ಕಿಂಗ್ಸ್ ಗೆ ಬೇಕಾದ್ದು ಇದೇ. ಫಲಿತಾಂಶ ಎಂದರೆ ಚೆನ್ನೈ ಸೂಪರ್ ಕಿಂಗ್ಸ್ 20 ರನ್ ಗಳ ಅಂತರದಿಂದ ಗೆಲವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಕಲೆಹಾಕಿತು. ಆರಂಭಿಕ ಆಟಗಾರ ರಚಿನ್ ರವೀಂದ್ರ 21, ನಾಯಕ ಋತುರಾಜ್ ಗಾಯಕ್ವಾಡ್ 69, ಶಿವಂ ದುಬೆ ಅಜೇಯ 66, ಮಿಚ್ಚೆಲ್ 17,ಎಂಎಸ್ ಧೋನಿ ಅಜೇಯ 20 ರನ್ ಗಳಿಸುವುದರೊಂದಿಗೆ ಮುಂಬೈ ಗೆಲ್ಲಲು 207 ರನ್ ಗಳ ಗುರಿ ನೀಡಿತು.

ಸಿಎಸ್ ಕೆ ನೀಡಿದ 207 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ 5 ಸಿಕ್ಸರ್, 11 ಬೌಂಡರಿಗಳೊಂದಿಗೆ ಅಜೇಯ 105 ರನ್ ಗಳಿಸಿದರು. ಆದರೆ ಉಳಿದ ಯಾವುದೇ ಆಟಗಾರರು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇಶಾನ್ ಕಿಶಾನ್ 23, ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ಔಟಾದರು.

ತಿಲಕ್ ವರ್ಮಾ 31, ಹಾರ್ದಿಕ್ ಪಾಂಡ್ಯ 2, ಥೀಮ್ ಡೇವಿಡ್ 13, ಮೊಹಮ್ಮದ್ ನಬಿ 4 ರನ್ ಗಳಿಸುವುದರೊಂದಿಗೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ 20 ರನ್ ಗಳಿಂದ ಗೆಲುವಿನ ನಗೆ ಬೀರಿತು. ಸಿಎಸ್ ಕೆ ಪರ 4 ವಿಕೆಟ್ ಪಡೆದ ಮತೀಶಾ ಪತಿರಾಣ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Author

Leave a Reply

Your email address will not be published. Required fields are marked *