ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಮೈಸೂರಿನಲ್ಲಿ ಮೋದಿ ಪ್ರಚಾರ ಸಭೆ; ಒಂದು ಪಕ್ಕದಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಇನ್ನೊಂದು ಪಕ್ಕದಲ್ಲಿ ದೇವೇಗೌಡ ಕುಮಾರಸ್ವಾಮಿ, ಪರಿವಾರವಾದ ವಿರೋಧಿಸುವ ಪ್ರಧಾನಿ
PM Narendra Modi : ಅವರ ಮೊದಲ ಸಭೆ ಭಾನುವಾರ ಸಂಜೆ ನಾಲ್ಕು ಗಂಟೆಗೆ ಮೈಸೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಮೈಸೂರು : ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ರಾಜ್ಯದಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಅವರ ಮೊದಲ ಸಭೆ ಭಾನುವಾರ ಸಂಜೆ ನಾಲ್ಕು ಗಂಟೆಗೆ ಮೈಸೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಈ ಸಭೆಯ ಇನ್ನೊಂದು ವಿಶೇಷ ಎಂದರೆ ಒಂದೆಡೆ ಜೆಡಿಎಸ್ ನ ತಂದೆ ಮಗ ದೇವೇಗೌಡ ಮತ್ತು ಕುಮಾರಸ್ವಾಮಿ ಇನ್ನೊಂದೆಡೆ ಬಿಜೆಪಿಯ ತಂದೆ ಮಗ ಯಡಿಯೂರಪ್ಪ ವಿಜಯೇಂದ್ರ ವೇದಿಕೆಯ ಮೇಲೆ ವಿರಾಜಮಾನರಾಗಲಿದ್ದಾರೆ. ನಡುವೆ ಕುಟುಂಬ ರಾಜಕಾರಣದ ಕಡು ವಿರೋಧಿ ನರೇಂದ್ರ ಮೋದಿ ಅವರು ಕುಳಿತುಕೊಳ್ಳುತ್ತಾರೆ.
ಮೈಸೂರಿನ ರಾಜವಂಶಸ್ತ ಯದುವೀರ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಪಕ್ಕದ ಮಂಡ್ಯದಿಂದ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ನೆಲ. ಈ ಎಲ್ಲ ಅಂಶಗಳನ್ನು ಗಮನಿಸಿ ಪ್ರಧಾನಿ ತಮ್ಮ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲು ಮಂಡ್ಯವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ಮೈತ್ರಿಯನ್ನು ಇನ್ನಷ್ಟು ಬಲಪಡಿಸಲು ಇದರಿಂದ ಸಹಾಯವಾಗಬಹುದು ಎಂಬುದು ನಂಬಿಕೆ.
ಈ ಸಭೆಯನ್ನು ಮುಗಿಸಿದ ನಂತರ ಪ್ರಧಾನಿ ಸಂಜೆ 7.30 ಕ್ಕೆ ಮಂಗಳೂರಿಗೆ ತೆರಳುವರು. ಹಿಂದುತ್ವದ ಕುಲುಮೆಯಲ್ಲಿ ರೋಡ್ ಶೋ ನಡೆಯಲಿದೆ.
