ಕಾಂಗ್ರೆಸ್ ಪಕ್ಷ ಎಂದರೆ ಹಾಗಲ ಕಾಯಿ ಇದ್ದಂತೆ. ಅದನ್ನು ಯಾವುದರ ಜೊತೆಗೆ ಸೇರಿಸಿದರೂ ಅದರ ಕಹಿ ಹೋಗುವುದಿಲ್ಲ.
ಈ ಮಾತು ಹೇಳಿದವರು ಈ ದೇಶದ ಪ್ರಧಾನಿ ನರೇಂದ್ರ ಮೋದಿ. ನಿನ್ನೆ ಮಹಾರಾಷ್ಟ್ರದಲ್ಲಿ ಮೊದಲ ಚುನಾವಣಾ ಪ್ರಚಾರ ಭಾಷಣ ಮಾಡಿದ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.
ಹಾಗಲ ಕಾಯಿ ಕಹಿ ಇರಬಹುದು. ಆದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು. ಸಕ್ಕರೆ ಕಾಯಿಲೆಗೆ ದಿವ್ಯ ಔಷಧ. ಇದನ್ನು ಪ್ರಧಾನಿಯವರಿಗೆ ಯಾರೂ ಹೇಳಿಲ್ಲ ಎಂದು ತೋರುತ್ತದೆ,
ಹಾಗೆ ಈ ದೇಶದಲ್ಲಿ ಭರವಸೆಗಳ ಸುಳ್ಳು ಸಿಹಿ ತಿನ್ನಿಸಿ ಭ್ರಮನಿರಸನದ ಸಕ್ಕರೆ ಕಾಯಿಲೆ ಬಂದಿದೆ. ಇದಕ್ಕೆ ಹಾಗಲ ಕಾಯಿ ಬೇಕಲ್ಲವೆ ?
ಈ ಬಗ್ಗೆಯೂ ಫ್ರಧಾನಿ ಯಾವ ವಿವರವನ್ನು ನೀಡಲಿಲ್ಲ.
ಬದಲಿಗೆ ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ದೂರಿದರು.
ಕಳೆದ ೧೦ ವರ್ಶಗಳಿಂದ ಕಾಂಗ್ರೆಸ್ ಅಧಿಕಾರದಿಂದ ದೂರವಾಗಿದೆ ಹೀಗಾಗಿ ದೇಶದ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಾಗಿದೆ ಎಂದು ಹೇಳಿಕೊಂಡರು.
ಆದರೆ ಈ ದೇಶದಲ್ಲಿ ಯಾವ ಸಮಸ್ಯೆಯೂ ಇಲ್ಲವೆ ಮೋದಿ ಪ್ರಧಾನಿಯಾದ ಮೇಲೆ ಎಲ್ಲ ಸಮಸ್ಯೆಗಳು ಬಗೆ ಹರಿದಿದ್ದರೆ ಮತ್ತೆ ಅವರು ಯಾಕೆ ಬೇಕು ? ಎಂಬ ಪ್ರಶ್ನೆಗಳನ್ನು ಕೇಳಬೇಕಲ್ಲವೆ ? ಆದರೆ ಕೇಳುವುದು ಹೇಗೆ ಮತ್ತು ಎಲ್ಲಿ ?
