ಗನ್ ಹಿಡಿದೇ ಮುಖ್ಯಮಂತ್ರಿಗಳಿಗೆ ಹಾರ ಹಾಕಿದ… ಪೊಲೀಸರು ಇದನ್ನೆಲ್ಲ ನೋಡುತ್ತಿದ್ದರು. . ರಾಜ್ಯ ಪೊಲೀಸರಿಗೆ ಕಪ್ಪು ಚುಕ್ಕೆ..

ಬೆಂಗಳೂರು : ಸೊಂಟದಲ್ಲಿ ರಿವಾಲ್ವರ್. ಮುಖ್ಯಮಂತ್ರಿ ಹಾಗೂ ಇತರ ನಾಯಕರಿಗೆ ಮಾಲೆ. ಇದನ್ನು ಸೆರೆ ಹಿಡಿದ ಕ್ಯಾಮರಾಗಳು. ನಿನ್ನೆ ಮುಖ್ಯಮಂತ್ರಿಗಳ ರೋಡ್ ಶೋ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.

ಇದು ಭದ್ರತಾ ಲೋಪ ಎನ್ನುಲು ಯಾವುದೇ ಬುದ್ದಿವಂತಿಕೆ ಬೇಕಾಗಿಲ್ಲ. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಒಬ್ಬ ವ್ಯಕ್ತಿ ಆಯುಧ ಹಿಡಿದು ಬರುತ್ತಾನೆ ಎಂದರೆ ಪೊಲೀಸರು ಏನನ್ನು ಕಾಯುತ್ತಿದ್ದರು ? ಎನೋ ವ್ಯತ್ಯಾಸ ಆಗಿದ್ದರೆ ?
ಈ ಪ್ರಕರಣ ಪೋಲೀಸರ ಭದ್ರತಾ ವ್ಯವಸ್ಥೆಯ ಬಗ್ಗೆಯೇ ಪ್ರಶ್ನಿಸುವಂತೆ ಮಾಡಿದೆ.

ಈ ವ್ಯಕ್ತಿಗೆ ಸಾಮಾನ್ಯ ಜ್ನಾನವೂ ಇದ್ದಂತಿಲ್ಲ. ತಾನು ಕಾರ್ಯಕರ್ತ ಏನು ಮಾಡಿದರೂ ನಡೆಯುತ್ತದೆ ಎಂಬ ದುರಹಂಕಾರ ಇದ್ದೀತು.

ಈ ಘಟನೆ ಕುರಿತು ವರದಿ ಬಂದ ಮೇಲೆ ರಿಯಾಜ್ ಎಂಬ ಈ ವ್ಯಕ್ತಿ ವಾಹಿನಿಯೊಂದರಲ್ಲಿ ತಮ್ಮನ್ನು ಸಮರ್ಥಿಸಿಕೊಂಡರು. ನನಗೆ ಜೀವ ಭಯ ಇದೆ ಹೀಗಾಗಿ ಪೋಲೀಸರಿಂದ ವಿಶೇಷ ಪರವಾನಿಗೆ ಪಡೆದಿದ್ದೇನೆ. ಚುನಾವಣೆ ನೀತಿ ಸಂಹಿತೆ ಇದ್ದರೂ ನನಗೆ ವಿಶೇಷ ಅನುಮತಿ ಇದೆ ಎಂದರು.

ಇದು ನಿಜನಾ ? ಪೊಲೀಸರು ಅದು ಹೇಗೆ ವಿಶೇಷ ಅನುಮತಿ ನೀಡುತ್ತಾರೆ ? ಮುಖ್ಯಮಂತ್ರಿಗಳು ಭಾಗ ಒಹಿಸಿದ ಕಾರ್ಯಕ್ರಮದಲ್ಲಿ ಗನ್ ಹಿಡಿಯಲು ಅನುಮತಿ ನೀಡಿದ್ದರೆ ಇವರು ಯಾವ ಸೀಮೆ ಪೊಲೀಸರು ? ಇವರಿಂದ ಏನನ್ನು ರಕ್ಷಣೆ ಮಾಡಲು ಸಾಧ್ಯ ? ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ಬಗ್ಗೆ ಯೋಚಿಸಲಿ.

ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆಯಿತು., ತೀವ್ರ ಆತಂಕಕ್ಕೆ ಕಾರಣವಾಯಿತು. .

ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ ಮತ್ತು ಅಭ್ಯರ್ಥಿ ಸೌಮ್ಯರೆಡ್ಡಿ ನಿಂತಿದ್ದ ಕ್ಯಾಂಟೆರ್ ಮೇಲೆ ಹತ್ತಿದ ವ್ಯಕ್ತಿಯೋರ್ವ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿದರು. ಈ ವೇಳೆ ಆತನ ಸೊಂಟದಲ್ಲಿ ಗನ್ ಇರುವುದು ಕಾಣುತ್ತಿತ್ತು.
ಇದು ಎಲ್ಲ ಮಾಧ್ಯಮಗಳಲ್ಲಿ ಬಂದ ಮೇಲೆ ಪೊಲೀಸರು ಆತನನ್ನು ವಶಪಡೆದರು. ವಿಚಾರಣೆ ನಡೆಸಿದರು.

Author

error: