ಅವಳು ಗುಡ್ಡಿ. ಗಿಡ್ಡಿಯೂ ಹೌದು. ಚೋಟಿ.. ಆತ ಲಂಬೂಜಿ. ಅವರ ಪ್ರೀತಿ ದಾಂಪತ್ಯ ೫೦ ವರ್ಷಗಳನ್ನು ಪೂರೈಸಿದೆ, ಈ ಅವಧಿಯಲ್ಲಿ ಅವರು ಪ್ರೀತಿಸಿದ್ದಾರೆ. ಜಗಳವಾಡಿದ್ದಾರೆ. ಲಂಬೂಜಿಯ ಪ್ರೇಮ ಪ್ರಕರಣಗಳು ಹಲವು ಸಂದರ್ಭಗಳು ಅವಳನ್ನು ಹೈರಾಣಾಗಿಸಿದೆ. ಆದರೆ ಎಂದೂ ಪ್ರೀತಿಯ ದೀಪ ಆರಿಲ್ಲ.
ಪ್ರೀತಿಯ ದಿನಗಳು. ನಂತರ ದಾಂಪತ್ಯ. ಹಲವು ನೆನಪುಗಳು. ಕೆಲವು ಸಿಹಿ. ಕೆಲವು ಕಹಿ. ಆದರೂ ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ಎಂಬಂತೆ ಬದುಕಿದವರು ಅವರು.
ದಾಂಪತ್ಯ ಮತ್ತಷ್ಟು ಗಟ್ಟಿಯಾಯಿತು. ಮಕ್ಕಳು ಬಂದರು. ಬದುಕು ಇನ್ನೊಂದು ಮಗ್ಗಲಿಗೆ ಹೊರಳಿಕೊಂಡಿತು. ಆದರೆ ನೆನಪುಗಳ ಮೆರವಣಿಗೆಗೆ ಕೊನೆ ಎಂಬುದು ಇಲ್ಲವಲ್ಲ…?
ಇಂದು ಗುಡ್ಡಿ ಅಥವಾ ಗಿಡ್ದಿಯ ಜನ್ಮ ದಿನ. ಲಂಬೂಜಿಗೆ ಸಂತಸದ ಸಮಯ,
ಇವರ ಹೆಸರನ್ನು ಹೇಳುವುದಕ್ಕೆ ಮರೆತು ಬಿಟ್ಟೆ. ಇವರು ಅಮಿತಾಬ್ ಬಚ಼್ಚನ್ ಜಯಾ ಬಚ್ಚನ್ ಜೋಡಿ.
ಜಯಾ ಮತ್ತು ಅಮಿತಾಬ್ ಮದುವೆಯಾಗಿ ೫೦ ವರ್ಷ ಪೂರೈಸಿದೆ. ಹಲವು ಸಂದರ್ಭಗಳಲ್ಲಿ ಅವರು ತಮ್ಮ ಪ್ರೀತಿ ಬದುಕಿನ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಜಯಾ ಅಮಿತಾಬ್ ರನ್ನು ಲಂಬೂಜಿ ಎಂದು ಕರೆಯುತ್ತಿದ್ದರಂತೆ. ಅದು ನಿಜ ತಾನೇ. ಅಮಿತಾಬ್ ಎಲ್ಲ ದೃಷ್ಟಿಯಲ್ಲೂ ಲಂಬೂಜಿ.. ಅವರ ವ್ಯಕ್ತಿತ್ವವೂ ಹಾಗೆ.
ಆದರೆ ಮಗಳು ಶ್ವೇತ ಬಂದ ಮೇಲೆ ಪರಿಸ್ಥಿತಿ ಬದಲಾಯಿತು. ಅಮ್ಮ ಅಪ್ಪನನ್ನು ಲಂಬೂಜಿ ಎಂದು ಕರೆಯುವುದನ್ನು ಅವಳು ಕೇಳಿದಳು. ಅವಳೂ ಅಪ್ಪನನ್ನು ಲಂಬೂಜಿ ಎಂದೇ ಕರೆಯತೊಡಗಿದಳು. ಆದರೆ ಜಯಾ ಬಚ್ಚನ್ ಗೆ ಇದು ಇಷ್ಟವಾಗುತ್ತಿರಲಿಲ್ಲ. ಅವಳೂ ಈ ವಿಚಾರದಲ್ಲಿ ಎಂತಹ ಸ್ವಾರ್ಥಿ ಎಂದರೆ ಅಮಿತಾಬ್ ಅವರನ್ನು ತಾನು ಮಾತ್ರಲಂಬೂಜಿ ಎಂದು ಕರೆಯಬೇಕು. ಅದಕ್ಕಾಗಿ ತ್ಯಾಗ ಮಾಡಿದಳು ಜಯಾ. ಅಂದಿನಿಂದ ತಾನು ಲಂಬೂಜಿ ಎಂದು ಕರೆಯುವುದನ್ನು ನಿಲ್ಲಿಸಿ ಬಿಟ್ಟಳು.ಶ್ವೇತಾ ಕೂಡ ಬದಳಾದಳು. ಅಪ್ಪನನ್ನು ಪಪ್ಪ ಎಂದು ಕರೆಯತೊಡಗಿದಳು.
ಬದುಕು ಎಂದರೆ ಹಾಗೆ. ಮಕ್ಕಳು ಅಪ್ಪ ಅಮ್ಮನನ್ನು ಅನುಕರಿಸುತ್ತಾರೆ. ಯಾಕೆಂದರೆ ಮಕ್ಕಳು ಅಪ್ಪ ಅಮ್ಮನ ಮುಂದುವರಿಕೆ.. ಅದಕ್ಕಾಗಿ ತ್ಯಾಗ ಮಾಡಬೇಕಾದವರು ಅಪ್ಪ ಅಮ್ಮನೇ,
ಏನಿವೇ… ಜಯಾ ಮತ್ತು ಅಮಿತಾಬ್ ಗೆ ಶುಭಾಷಯಗಳು. ನೂರು ವರ್ಷ ನಿಮ್ಮ ದಾಂಪತ್ಯ ಹೀಗೆ ಮುಂದುವರಿಯಲಿ.
ಜಯಾಜಿ..ಜನ್ಮ ದಿನ ಕಾ ಶುಭ ಕಾಮನಾ…

Author

Leave a Reply

Your email address will not be published. Required fields are marked *