ಹೈದರಬಾದ್ : ಆರ್ ಸಿ ಬಿ ಗೆಲ್ಲುವುದನ್ನೇ ಮರೆತು ಬಿಟ್ಟಿತ್ತು. ನಾವೆಲ್ಲ ಕಪ್ ನಮ್ದೇ ಎಂದು ಹೇಳುತ್ತ ಕುಣಿದಾಡಬೇಕಿತ್ತು.. ಆರ್ ಸಿಬಿ ಆಡಿದ 8 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 35 ರನ್ ಮೂಲಕ ಗೆಲುವು ಸಾಧಿಸಿತು. ಕಪ್ಪಂತೂ ಇಲ್ಲ. ಚಿಪ್ಪೂ ಇಲ್ಲ ಎನ್ನುವ ಸಮಾಧಾನ.

ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಭರ್ಜರಿ ಪ್ರದರ್ಶನ ನೀಡಿತು. ವಿರಾಟ್ ಕೊಹ್ಲಿ 51 ಹಾಗೂ ರಜತ್ ಪಾಟಿದಾರ್ 50 ಅದ್ಭುತ ಅರ್ಧ ಶತಕದ ನೆರವಿನಿಂದ ಆರ್ ಸಿಬಿ ನಿಗದಿತ ಓವರ್ 7 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತ್ತು. ಆರ್ ಸಿಬಿ ಪರ ಫಾಫ್ ಡುಪ್ಲೆಸಿಸ್ 25, ಕ್ಯಾಮರೂನ್ ಗ್ರೀನ್ 37 ರನ್ ಗಳಿಸಿದರು. ಹೈದರಾಬಾದ್ ಪರ ಜಯದೇವ್ ಉನಾದ್ಕಟ್ 3, ನಟರಾಜನ್ 2 ವಿಕೆಟ್ ಪಡೆದರು.

ಬೃಹತ್ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ . ಟ್ರಾವಿಸ್ ಹೆಡ್ ರನ್ನು ಔಟ್ ಮಾಡುವ ಮೂಲಕ ಜ್ಯಾಕ್ಸ್ ಹೈದರಾಬಾದ್ ಗೆ ಮೊದಲ ಆಘಾತ ನೀಡಿದರು. ನಂತರ ಮಾರ್ಕ್ರಾಮ್ 7, ನಿತೀಶ್ ರೆಡ್ಡಿ 13 ರನ್ ಗಳಿಸಿ ಔಟಾದರು. ಈ ವೇಳೆ ಶಹಬಾದ್ ಅಹ್ಮದ್ ಏಕಾಂಗಿ ಹೋರಾಟ ನಡೆಸಿದ್ದು ಅಜೇಯ 40 ರನ್ ಬಾರಿಸಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಇನ್ನುಳಿದಂತೆ ಪ್ಯಾಟ್ ಕಮಿನ್ಸ್ 31, ಭುವನೇಶ್ವರ್ ಕುಮಾರ್ 13 ಹಾಗೂ ಜಯದೇವ್ ಉನಾದ್ಕಟ್ ಅಜೇಯ 8 ರನ್ ಗಳಿಸಿದರು. ಅಂತಿಮವಾಗಿ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಶಕ್ತವಾವಾಗಿದ್ದು 35 ರನ್ ಗಳಿಂದ ಆರ್ ಸಿಬಿಗೆ ಶರಣಾಯಿತು. ಟೂರ್ನಿಯಲ್ಲಿ ಆರ್ ಸಿಬಿ ತಂಡ 9 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *