ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರ ದೆಹಲಿಯ ಪ್ರಧಾನ ಮಂತ್ರಿ ನಿವಾಸದಲ್ಲಿ ಸಂವಾದ ನಡೆಸಿದರು. ಕೃತಕ ಬುದ್ಧಿಮತ್ತೆ ಸಾರ್ವಜನಿಕ ಮೂಲಸೌಕರ್ಯ, ಹವಾಮಾನ ಬದಲಾವಣೆ, ಭಾರತದ ಕೃಷಿ, ಆರ್ಥಿಕ ಕ್ಷೇತ್ರ ಹೀಗೆ ಹಲವು ವಿಚಾರಗಳ ಕುರಿತು ವ್ಯಾಪಕವಾಗಿ ಚರ್ಚಿ ನಡೆಸಿದರು.

ಪ್ರಧಾನಿ ನಮೋ ಅಪ್ಲಿಕೇಶನ್‌ನಲ್ಲಿನ ಫೋಟೋ ಬೂತ್ ಬಳಸಿ ಸೆಲ್ಫಿ ತೆಗೆದುಕೊಳ್ಳಲು ಮೈಕ್ರೋಸಾಫ್ಟ್ ಮುಖ್ಯಸ್ಥರನ್ನು ಕೇಳಿಕೊಂಡರು. ಭಾರತದ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಮುಕ್ತಾಯಗೊಂಡ 2023 ರ ಜಿ 20 ಶೃಂಗಸಭೆಯನ್ನು ಮೋದಿ ಪ್ರಸ್ತಾಪಿಸಿದರು.

“ಜಿ 20 ಶೃಂಗಸಭೆಯ ಮೊದಲು ನಾವು ವ್ಯಾಪಕವಾದ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ. ನೀವು ನೋಡಿದಂತೆ, ಶೃಂಗಸಭೆಯ ಪ್ರಕ್ರಿಯೆಗಳು ಸಾಕಷ್ಟು ತಿರುವುಗಳನ್ನು ಪಡೆದುಕೊಂಡವು ಎಂದು ಮೋದಿ ಹೇಳಿದರು.

ಇದಕ್ಕೆ ಉತ್ತರಿಸಿದ ಬಿಲ್ ಗೇಟ್ಸ್, “G20 ಹೆಚ್ಚು ಅಂತರ್ಗತವಾಗಿದೆ. ಭಾರತವು ಆತಿಥ್ಯ ವಹಿಸಿದ್ದು ನೋಡಲು ಅದ್ಭುತವಾಗಿತ್ತು ಎಂದರು.

Leave a Reply

Your email address will not be published. Required fields are marked *