ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಒಂದೆಡೆ ಮುಸ್ಲಿಂ ರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಮೇಲೆ ದಾಳಿ ನಡೆಸುತ್ತಿದ್ದಾರೆ. ಮುಸ್ಲಿಂರಿಗೆ ಸಂಪತ್ತಿನ ಹಂಚಿಕೆಯನ್ನು ಕಾಂಗ್ರೆಸ್ ಮಾಡಲಿದೆ ಎಂಬುದರಿಂದ ಇದು ಪ್ರಾರಂಭವಾಯಿತು. ನಂತರ ಮೀಸಲಾತಿ ವಿಚಾರವನ್ನು ಹಿಡಿದುಕೊಂಡು ದಲಿತರ ಮತ್ತು ಹಿಂದುಳಿದ ವರ್ಗದವರನ್ನು ಮುಸ್ಲಿಂ ರ ವಿರುದ್ಧ ಎತ್ತಿ ಕಟ್ಟಲು ಯತ್ನಿಸಲಾಯಿತು.
ಈಗ ಇನ್ನೊಂದೆಡೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದನದ ಮಾಂಸದ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಮೇಲೆ ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಮುಸ್ಲೀಂ ರಿಗೆ ಅವರಿಗೆ ಇಷ್ಟವಾದ ಆಹಾರವನ್ನು ಸ್ವೀಕರಿಸುವ ಸ್ವಾತಂತ್ರ್ಯವನ್ನು ನೀಡಲು ಹೊರಟಿದೆ. ಇದರ ಅರ್ಥ ಗೋ ಹತ್ಯೆಗೆ ಅವಕಾಶ ನೀಡುವುದೇ ಆಗಿದೆ ಎಂದು ಅವರು ದೂರಿದ್ದಾರೆ.
ನಮ್ಮ ನಂಬಿಕೆಯ ಪ್ರಕಾರ ಗೋವು ನಮಗೆ ತಾಯಿ. ಗೋಮಾತಾ. ಆದರೆ ಈ ಕಾಂಗ್ರೆಸ್ ನವರು ಗೋ ಮಾತೆಯನ್ನು ಕಟುಕರಿಗೆ ನೀಡಲು ಹೊರಟಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆಪಾದಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮಹಿಳೆಯರ ಧನ ವನ್ನು ಕಸಿದುಕೊಂಡು ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಯರಿಗೆ ಹಂಚಲು ಹೊರಟಿದೆ ಎಂದು ಅವರು ಆಪಾದಿಸಿದರು.

Author

Leave a Reply

Your email address will not be published. Required fields are marked *