ಇವತ್ತಿನ ರಾಜಕಾರಣದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಕಷ್ಟ ಅವರಿಗೆ ಗೊತ್ತು. ಬೆಳಿಗ್ಗೆ ಎದ್ದರೆ ಶಾಸಕರು ಮತ್ತು ಸಂಸತ್ ಸದಸ್ಯರ ಮನೆಯ ಎದುರು ನಿಂತಿರಬೇಕು. ಅವರ ಆದೇಶ ಪಾಲಿಸಬೇಕು. ಕೆಲವರದಂತೂ ಪಾಳೇಗಾರಿಕೆ ರಾಜಕಾರಣ.
ಇಂತಹ ಪಾಳೇಗಾರರಿಂದ ನೋವು ಅನುಭವಿಸುತ್ತಿರುವ ಅಧಿಕಾರಿಗಳ ಸಂಖ್ಯೆ ಏನೂ ಕಡಿಮೆ ಇಲ್ಲ. ಆದರೆ ಹೇಳುವಂತಿಲ್ಲ ಅನುಭವಿಸುವಂತಿಲ್ಲ.
ಆದರೆ ಎಲ್ಲರಿಗೂ ಒಂದೆಲ್ಲ ಒಂದು ಸಮಯ ಬರುತ್ತದೆ. ಸಮಯ ಬಂದಾಗ ಎಲ್ಲಿ ಇಡಬೇಕೋ ಅಲ್ಲಿ ಇಡಲು ಪ್ರಾಮಾಣಿಕ ಅಧಿಕಾರಿಗಳು ಹಿಂಜರಿಯುವುದಿಲ್ಲ.
ಈಗ ಪ್ರಚಾರದಲ್ಲಿರುವ ಹಾಸನ ಕೂಡ ಹಾಗೆ. ಅಲ್ಲಿ ಹೋಗಲು ಅಧಿಕಾರಿಗಳೂ ಹಿಂಜರಿಯುತ್ತಾರೆ. ಇದಕ್ಕೆ ಕಾರಣ ಎಚ್.ಡಿ. ರೇವಣ್ಣ ಕುಟುಂಬ. ಈ ಕುಟುಂಬದ ಸದಸ್ಯರ ಮಾತು ಕೇಳಲು ಅವರ ಮನೆ ಬಾಗಿಲಲ್ಲಿ ನಾಯಿಯಂತೆ ಕಾಯಬೇಕು.
ಆದರೆ ಸಮಯ ಬಂದರೆ ಅಧಿಕಾರಿಗಳು ತಿರುಗಿ ಬೀಳುತ್ತಾರೆ. ತಮ್ಮ ಒಳಗೆ ಇರುವುದನ್ನು ಹೊರ ಹಾಕುತ್ತಾರೆ,
ಇದಕ್ಕೆ ಉದಾಹರಣೆ ಜಿಲ್ಲಾಧಿಕಾರಿ ಸತ್ಯಭಾಮಾ. ಅವರು ಇಂದು ಆಡಿರುವ ಮಾತುಗಳನ್ನು ನೀವು ಕೆಳಿಸಿಕೊಳ್ಳಲೇ ಬೇಕು. ಅವರ ಮನಸ್ಸಿನಲ್ಲಿ ಎಂತಹ ನೋವು ಇರಬಹುದು ಎಂಬುದು ಈ ಮಾತಿನಿಂದಲೇ ಅರ್ಥವಾಗುತ್ತದೆ.
ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು. ಶಿಶು ಪಾಲನಿಗೆ ಕೃಷ್ಣ ನೂರು ತಪ್ಪು ಮಾಡುವ ವರೆಗೆ ಕಾದ..
ಎಂತಹ ಮಾತು ಇದು. ಅಬ್ಬಬ್ಬಾ,,,,
ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಹಾಸನ ನಗರದ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯ್ತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಗತಿಪರ ಸಂಘಟನೆಗಳು, ಸಾಹಿತಿ, ಚಿಂತಕರು ಪ್ರತಿಭಟನೆ ನಡೆಸಿ, ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದರು.
ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ಪೆನ್‌ಡ್ರೈವ್ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು ತನಿಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು. ಶಿಶು ಪಾಲನಿಗೆ ಕೃಷ್ಣ ನೂರು ತಪ್ಪು ಮಾಡಲು ಅವಕಾಶ ಕೊಟ್ಟ. 101ನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು ಜಿಲ್ಲಾಧಿಕಾರಿ. ಈಗಲೂ ಎಲ್ಲಾ ರೀತಿಯಲ್ಲೂ ನ್ಯಾಯ ಸಿಗುತ್ತದೆ ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿ, ಇಲ್ಲಿ ಎಲ್ಲಾ ಹೋರಾಟಗಾರರು ಬಂದಿದ್ದೀರಿ. ನಿಮ್ಮೆಲ್ಲರ ಮನವಿಯನ್ನು ಪರಿಗಣಿಸಿದ್ದೇನೆ. ಸೂಕ್ತ ತನಿಖೆಯಾಗಿ ನಿಮಗೆಲ್ಲಾ ನ್ಯಾಯ ಸಿಗುತ್ತದೆ ಎಂದು ಭರವಸೆ ನೀಡಿದರು.
