ಪ್ರಭೀರ್ ಪುರಕಾಯಸ್ತ ಬಂಧನಕ್ಕೆ ಯಾಕೆ ತರಾತುರಿ ?
ಯಾಕೆ ಈ ವಿಚಾರವನ್ನು ಅವರ ವಕೀಲರಿಗೆ ತಿಳಿಸಲಿಲ್ಲ ?
ಬೆಳಿಗ್ಗೆ ೬ ಗಂಟೆಗೆ ಯಾಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಿರಿ ?
ಪೊಳೀಸರಿಗೆ ನ್ಯಾಯಾಲಯದ ಪ್ರಶ್ನೆ

ನ್ಯೂಸ್ ಕ್ಲಿಕ್ ಸಂಪಾದಕರ ಬಂಧನಕ್ಕೆ ತೋರಿದ ತರಾತುರಿಯ ಕುರಿತು ಸರ್ವೋಚ್ಚ ನ್ಯಾಯಾಲಯ ದೆಹಲಿ ಪೋಲಿಸರನ್ನು ತರಾಟೆಗೆ ತೆಗೆದುಕೊಂಡಿದೆ.
ಸಂಪಾದಕ ಪ್ರಭೀರ್ ಪುರಕಾಯಸ್ತ ಅವರ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಪೋಲಿಸರ ವಿಶೇಷ ಘಟಕದ ವರ್ತನೆ ಮತ್ತು ನಡವಳಿಕೆಯನ್ನು ನ್ಯಾಯಾಲಯ ಪ್ರಶ್ನಿಸಿದೆ. ಅವರನ್ನು ಬಂಧಿಸುವ ಮೊದಲು ಅವರ ವಕೀಲರಿಗೆ ಯಾಕೆ ಈ ವಿಷಯವನ್ನು ತಿಳಿಸಿಲ್ಲ ಎಂಬ ಬಗ್ಗೆ ವಿವರವನ್ನು ಬಯಸಿದೆ.
ನ್ಯಾಯಮೂರ್ತಿ ಬಿ ಆರ್. ಗವಾಯಿ ಮತ್ತು ಸಂದೀಪ್ಮೆಹತಾ ಅವರಿದ್ದ ಪೀಠ ನೀವು ಅವರನ್ನುಬಂಧಿಸುವ ಮೊದಲು ಅವರ ವಕೀಲರಿಗೆ ತಿಳಿಸಬೇಕಿತ್ತು ಅಲ್ಲವೆ ? ನೀವು ಹಿಂದಿನ ದಿನ ಸಂಜೆ ಅವರನ್ನು ಬಂಧಿಸಿದಿರಿ. ನೀವು ಈ ವಿಚಾರವನ್ನು ತಿಳಿಸಲು ನಿಮ್ಮ ಬಳಿ ಒಂದು ದಿನದ ಸಮಯವಿತ್ತು.ನೀವು ಬೆಳಿಗ್ಗೆ ೬ ಗಂಟೆಗೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ತರಾತುರಿ ಏನಿತ್ತು ಎಂದು ಪ್ರಶ್ನಿಸಿತು.
ನೀವು ಬೆಳಿಗ್ಗೆ ೧೦ ಗಂಟೆಗೋ ೧೧ ಗಂಟೆಗೋ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬಹುದಿತ್ತು. ಈ ನಡುವೆ ಅವರ ವಕೀಲರಿಗೂ ತಿಳಿಸಬಹುದಿತ್ತು ಎಂದೂ ಪೀಠ ತೀಳಿಸಿತು.
ಪುರಕಾಯಸ್ತ ಅವರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬ್ಬಲ್ ಪುರಕಾಯಸ್ತ ಅವರ ಬಂಧನವೇ ಕಾನೂನು ಬಾಹಿರ ಎಂದು ವಾದಿಸಿದರು

Author

Leave a Reply

Your email address will not be published. Required fields are marked *