*ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿ ನೀರು ಯೋಜನೆಗೆ ಸಂಪುಟ ಅಸ್ತು*ರೂ. 179. 50 ಕೋಟಿ ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ*ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ನಿರಂತರ ಶ್ರಮ ಮತ್ತು ಪ್ರಯತ್ನಕ್ಕೆ ಸಿಕ್ಕ ಫಲ*

ಧಾರವಾಡ, ಸೆ.05: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ಎತ್ತಿ ತುಂಬಿಸುವ ಯೋಜನೆಗೆ ರೂ. 179. 50 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಸಂಪುಟದ ಈ ನಿರ್ಣಯಕ್ಕೆ ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಹಾಗೂ ಕಲಘಟಗಿ ವಿಧಾಸಭಾ ಕ್ಷೇತ್ರದ ಶಾಸಕರೂ ಆಗಿರುವ ಸಂತೋಷ್‌ ಎಸ್‌ ಲಾಡ್‌ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಭಾಗದ ಅನ್ನದಾತರ ಬಹುದಿನಗಳ ಬೇಡಿಕೆಯಾಗಿದ್ದ ಹಾಗೂ ಸಂತೋಷ್‌ ಲಾಡ್‌ ಅವರ ಕನಸಾದ ಈ ಏತ ನೀರಾವರಿ ಯೋಜನೆ ಈಗ ಸಾಕಾರಗೊಳ್ಳುತ್ತಿದ್ದು, ಲಾಡ್‌ ಅವರ ನಿರಂತರ ಶ್ರಮ ಹಾಗೂ ಪ್ರಯತ್ನ ಫಲ ಕೊಟ್ಟಂತಾಗಿದೆ. ಈ ನೀರೆತ್ತುವ ಯೋಜನೆಗೆ ಇದೀಗ ಸರ್ಕಾರದಿಂದ ಅನುದಾನ ಬಿಡುಗೆಯಾಗಿದ್ದು, ಸಂಪುಟದಲ್ಲಿ ಅನುಮೋದನೆ ಪಡೆದು ವೇಗ ಸಿಕ್ಕಂತಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸುವ ಶಾಶ್ವತ ನೀರಾವರಿ ಯೋಜನೆ ಇದಾಗಿದ್ದು, ಈ ಭಾಗದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಈ ಕೆರೆ ತುಂಬಿಸುವ ಯೋಜನೆ ಅನುಕೂಲವಾಗಲಿದೆ.ಕೇವಲ ಕಲಘಟಗಿ ತಾಲೂಕು ಮಾತ್ರವಲ್ಲದೆ, ಧಾರವಾಡ ಜಿಲ್ಲೆಯ ಇತರ ತಾಲೂಕಿನಲ್ಲಿನ ಕೆರೆಗಳಿಗೂ ನದಿ ನೀರು ಹರಿಸುವ ಮಹದಾಸೆ ಸಚಿವ ಸಂತೋಷ್‌ ಲಾಡ್‌ ಅವರದ್ದು. ಇದೀಗ ಮೊದಲಾರ್ಧ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ಎತ್ತಿ ತುಂಬಿಸುವ 179. 50 ಕೋಟಿ ರೂ ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು ಎಂದಿದೆ.

Leave a Reply

Your email address will not be published. Required fields are marked *