CAA ಜೊತೆ NRC ; ಭಾರತೀಯ ಧರ್ಮನಿರಪೇಕ್ಷವಾದ ಮತ್ತು ಸಂವಿಧಾನ ವಿರೋಧಿ ಅಮೇರಿಕ ಕಾಂಗ್ರೆಸ್ ವರದಿ

CAA, NRC US Congress: ಸಿಎಎ ಮೂಲಕ ಆಡಳಿತಾರೂಢ ಬಿಜೆಪಿ ಹಿಂದೂ ಬಹುಸಂಖ್ಯಾತ ರಾಜಕಾರಣಕ್ಕೆ ಬಲ ನೀಡುತ್ತದೆ, ಈ ಮೂಲಕ ಮುಸ್ಲಿಂ ವಿರೋಧಿ ಏಜೆಂಡಾವನ್ನು ಜಾರಿಗೆ ತರಬಹುದು

ನವದೆಹಲಿ : ಭಾರತದ ಸಿಎಎ ಕಾನೂನಿನ ಅಂಶಗಳು ಭಾರತದ ಸಂವಿಧಾನಕ್ಕೆ ವಿರೋಧವಾಗಿವೆ ಎಂದು ಅಮೇರಿಕ ಕಾಂಗ್ರೆಸ್ ಸಂಶೋಧನ ವರದಿ ತಿಳಿಸಿದೆ. ಸಿಎಎ ಜೊತೆ ಗೆ ಎನ್ ಆರ್ ಸಿ ಸೇರುವುದರಿಂದ ಭಾರತದ ಮುಸ್ಲೀಂ ಸಮುದಾಯದ ಹಕ್ಕುಗಳು ಮೊಟಕುಗೊಳ್ಳಲಿದೆ ಎಂದು ಅದು ಹೇಳಿದೆ.

1955 ರ ನಾಗರಿಕ ಕಾನೂನನ್ನು ಬದಲಿಸುವ ಸಿ ಎ ಎ ಪಾಕಿಸ್ಥಾನ ಬಂಗ್ಲಾದೇಶ ಅಫಘಾನಿಸ್ಥಾನದ ಮುಲ್ಸಿಂ ಏತರರಿಗೆ ನಾಗರಿಕರಾಗುವ ಅವಕಾಶ ಕಲ್ಪಿಸುತ್ತದೆ, 2014 ಕ್ಕೆ ಮೊದಲು ಭಾರತಕ್ಕೆ ವಲಸೆ ಬಂದವರಿಗೆ ಇದು ಅನ್ವಯಿಸುತ್ತದೆ.

ಸಿಎಎ ಮೂಲಕ ಆಡಳಿತಾರೂಢ ಬಿಜೆಪಿ ಹಿಂದೂ ಬಹುಸಂಖ್ಯಾತ ರಾಜಕಾರಣಕ್ಕೆ ಬಲ ನೀಡುತ್ತದೆ, ಈ ಮೂಲಕ ಮುಸ್ಲಿಂ ವಿರೋಧಿ ಏಜೆಂಡಾವನ್ನು ಜಾರಿಗೆ ತರಬಹುದು. ಇದು ಭಾರತದ ಧರ್ಮ ನಿರಪೇಕ್ಶ ತತ್ವಾದರ್ಶಗಳಿಗೆ ವಿರೋಧ ಮಾತ್ರ ಅಲ್ಲ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಈ ವರದಿ ಹೇಳಿದೆ.

Author

error: