ಆಸ್ಪತ್ರೆಗೆ ದಾಖಲಾದ ನಟ ಶಿವರಾಜ್ ಕುಮಾರ್ ; ಆತಂಕ ಪಡಬೇಕಾಗಿಲ್ಲ…

ಬೆಂಗಳೂರು : ಸ್ಯಾಂಡಲ್ ನಟ ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯದ ಕಾರಣದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಆತಂಕ ಪಡುವ ಅಗತ್ಯ ಇಲ್ಲ. ಒಂದೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.

ತಮ್ಮ ಪತ್ನಿ ಗೀತಾ ಶಿವರಾಜ್​​ ಕುಮಾರ್​ ಅವರ ಪರವಾಗಿ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ, ಎಡಬಿಡದ ಚಿತ್ರೀಕರಣದಿಂದಾಗಿ ಅವರ ಸ್ಪಲ್ಪ ಆರೋಗ್ಯದ ಸಮಸ್ಯೆ ಉಂಟಾಗಿತ್ತು.

ಭಾನುವಾರ ದೇವನಹಳ್ಳಿ ಬಳಿ ಸಿನಿಮಾ ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದರು. ಆಗ ಸುಸ್ತು ಕಾಣಿಸಿಕೊಂಡಿತು. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಈಗ ಅವರ ಆರೋಗ್ಯದ ಸ್ಥಿತಿ ಸುಧಾರಿಸಿದೆ. ನಾಳೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

Author

error: