ಬೆಂಗಳೂರು: ಬಿಜೆಪಿ ವಿರುದ್ಧ ಸೆಡ್ಡು ಹೊಡೆದು ಶಿವಮೊಗ್ಗ ಲೋಕಸಭೆ ಚುನಾವಣೆಯಿಂದ ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಶಿವಮೊಗ್ಗ ಲೋಕಸಭೆ ಚುಮಾವಣೆಯಿಂದ ನಾಮಪತ್ರ ವಾಪಸ್ ಪಡೆಯುವಂತೆ ಈಶ್ವರಪ್ಪ ಅವರಿಗೆ ಡೆಡ್ ಲೈನ್ ನೀಡಲಾಗಿತ್ತು. ಆದರೆ ಅವರು ನಾಮಪತ್ರ ಹಿಂಪಡೆಯದ ಕಾರಣ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಕೆಎಸ್ ಈಶ್ವರಪ್ಪ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ನಾಮಪತ್ರ ವಾಪಸ್ ಪಡೆಯದೇ ಕಣದಲ್ಲಿ ಉಳಿದಿರುವ ಕೆಎಸ್ ಈಶ್ವರಪ್ಪ ಅವರಿಗೆ ಚುನಾವಣಾ ಆಯೋಗ ಇಂದು ಚುನಾವಣಾ ಚಿಹ್ನೆ ನೀಡಿದೆ. ಕಬ್ಬಿನ ಜೊತೆ ಕೈ ಕಟ್ಟಿಕೊಂಡ ನಿಂತ ರೈತನ ಚಿಹ್ನೆಯನ್ನು ಈಶ್ವರಪ್ಪ ಅವರಿಗೆ ನೀಡಲಾಗಿದೆ.
