ಕಾಂಗ್ರೆಸ್ ಪ್ರಣಾಳಿಕೆಯಂತೆ ಕಾಣುತ್ತಿರುವ ಮೋದಿ ಗ್ಯಾರಂಟಿ, ಬಿಜೆಪಿ ಪ್ರಣಾಳಿಕೆ : ಬಡತನ, ಯುವಕರು ಮಹಿಳೆಯರ ಬಗ್ಗೆ ಮಾತೇ ಮಾತು..

BJP Manifesto 2024; ಮನೆಗಳಿಗೆ ಪೈಪ್ ಲೈನ್ ಗ್ಯಾಸ್ 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಲಾಭ.. ಇದು ಮೋದಿ ಅವರು ಬಿಡುಗಡೆ ಮಾಡಿದ ಪಕ್ಷದ ಪ್ರಣಾಳಿಕೆಯ ಮುಖ್ಯ ಅಂಶಗಳು

ನವದೆಹಲಿ : ಮುಂದಿನ ಐದು ವರ್ಷ ಉಚಿತ ಪಡಿತರ, 70 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ, ಮಹಿಳಾ ಶಕ್ತಿ ವೃದ್ಧಿ, ಹೊಸ ಉದ್ಯೋಗ ಸೃಷ್ಟಿ.. ಈ ಅಂಶಗಳನ್ನು ಗಮನಿಸಿದರೆ ಇದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಇರಬಹುದು ಎಂದು ಅನಿಸುವುದು ಸಹಜ. ಆದರೆ ಇದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಅಲ್ಲ. ಇದು ಮೋದಿ ಗ್ಯಾರಂಟಿ. ಬಿಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆ.

ಮೋದಿ ಕಿ ಗ್ಯಾರಂಟಿ ಹೆಸರಿನ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು.
ಪ್ರಧಾನಿ ನರೇಂದ್ರ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್. ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದರು.

ಈ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರು ಯುವಕರು ಮತ್ತು ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಹಾಗೆ 3 ಕೋಟಿ ಮನೆಗಳ ನಿರ್ಮಾಣ, ಮನೆಗಳಿಗೆ ಪೈಪ್ ಲೈನ್ ಗ್ಯಾಸ್ 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಲಾಭ.. ಇದು ಮೋದಿ ಅವರು ಬಿಡುಗಡೆ ಮಾಡಿದ ಪಕ್ಷದ ಪ್ರಣಾಳಿಕೆಯ ಮುಖ್ಯ ಅಂಶಗಳು.

ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡುವುದು, ಅಂತಾರಾಷ್ಟ್ರ‍ೀಯ ಸಂಬಂಧಗಳನ್ನು ಬಲಪಡಿಸುವುದು ಹೀಗೆ ಇನ್ನೂ ಕೆಲವು ವಿಷಯಗಳು ಓದಿ ಗ್ಯಾರಂಟಿಯಲ್ಲಿದೆ.

Author

error: