ನವದೆಹಲಿ : ಭಾರತದಲ್ಲಿಇಂತಹ ಪ್ರಧಾನಿ ಇನ್ನೊಬ್ಬರು ಬಂದಿರಲಿಕ್ಕಿಲ್ಲ. ಯಾಕೆಂದರೆ ಪ್ರಧಾನಿಯಾಗುವ ಹೊತ್ತಿಗೆ ಅವರ ಆದ್ಯತೆ ಬೇರೆ ಯಾಗಿರುತ್ತವೆ. ದೇಶದ ಸಮಸ್ಯೆ ತಲೆ ತಿನ್ನುತ್ತಿರುವಾಗ ಬೇರೆ ವಿಚಾರಕ್ಕೆ ಸಮಯವೆಲ್ಲಿ ?
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕ್ಯಾಮರಾ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಪಾಪ ಫೋಟೋ ಶೂಟ್ ಅಂದ್ರೆ ಏನು ಅಂತ ಗೊತ್ತಿರಲಿಲ್ಲ.
ನಂತರ ಬಂದ ಪ್ರಧಾನಿಗಳ ಕಥೆನೂ ಅಷ್ಟೇ. ಕ್ಯಾಮರಾ ಹಿಡಿದುಕೊಂಡವರು ತಮಗೆ ಬೇಕಾದ ಹಾಗೆ ಫೋಟೋ ತೆಗೀತಿದ್ದರು. ಫೋಟೋ ಶೂಟ್ ಮಾಡಿಸುವ ತಂಡವನ್ನೂ ಅವರು ಇಟ್ಟುಕೊಂಡಿರಲಿಲ್ಲ.
ಟೆಲಿಪ್ರಾಮ್ಟರ್ ಕೂಡ ಅವರಿಗೆ ಇರಲಿಲ್ಲ ಪಾಪ… ತಲೆಯಲ್ಲಿ ಏನಿದೆಯೋ ಅದನ್ನು ಮಾತನಾಡಬೇಕಿತ್ತು. ಈಗ ಹಾಗಲ್ಲ ಎಲ್ಲವೂ ಬದಲಾಗಿದೆ. ಎಲ್ಲದಕ್ಕೂ ಜನ ಇದ್ದಾರೆ.
