ಖಾಲಿಸ್ಥಾನಿ ಪ್ರತ್ಯೇಕತಾವಾದಿ ಹತ್ಯೆ ಪ್ರಕರಣ: ಬಂಧಿತ ಭಾರತೀಯರ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ: ಎಸ್ ಜೈಶಂಕರ್

S Jaishanakr :ಬಂಧಿತರಾಗಿರುವ ಈ ಮೂವರು ಯಾವುದೋ ಗ್ಯಾಂಗ್ ನ ಹಿನ್ನೆಲೆಯವರು ಎಂದು ಹೇಳಲಾಗುತ್ತಿದೆ. ಏನೇ ಇರಲಿ ಪೊಲೀಸ್ ವರದಿಗಾಗಿ ಕಾಯಬೇಕಾಗಿದೆ

ನವದೆಹಲಿ : ಖಾಲಿಸ್ಥಾನಿ ಉಗ್ರಗಾಮಿ ಹರದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಭಾರತದ ಮೂವರು ವ್ಯಕ್ತಿಗಳನ್ನು ಬಂಧಿಸಿರುವ ಬಗ್ಗೆ ಅಲ್ಲಿನ ಪೊಲೀಸರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ಈಗ ಬಂಧಿತರಾಗಿರುವ ಈ ಮೂವರು ಯಾವುದೋ ಗ್ಯಾಂಗ್ ನ ಹಿನ್ನೆಲೆಯವರು ಎಂದು ಹೇಳಲಾಗುತ್ತಿದೆ. ಏನೇ ಇರಲಿ ಪೊಲೀಸ್ ವರದಿಗಾಗಿ ಕಾಯಬೇಕಾಗಿದೆ ಎಂದು ಅವರು ಹೇಳಿದರು.

ಆದರೆ ನಾನು ಹೇಳಿದಂತೆ ನಮ್ಮ ಕಳವಳ ಎಂದರೆ, ಅವರು ಸಂಘಟಿತ ಅಪರಾಧವನ್ನು ಭಾರತದಲ್ಲಿ ಎಸಗಲು ಅವಕಾಶ ನೀಡಲಾಗುತ್ತಿದೆ ಎಂಬುದು. ಇದನ್ನು ಅವರಿಗೂ ನಾವು ಹೇಳಿದ್ದೇವೆ ಎಂದರು.

ಕಳೆದ ವರ್ಷ ಬ್ರಿಟೀಷ್ ಕೊಲಂಬಿಯಾದಲ್ಲಿ ನಿಜ್ಜರ್ ಹತ್ಯೆಯಾಗಿತ್ತು. ಕೆನಡಾದಪೊಲೀಸರು ಈ ಹತ್ಯೆಯ ಸಂಬಂಧದಲ್ಲಿ ಮೂವರು ಭಾರತೀಯರನ್ನು ಬಂಧಿಸಿದ್ದರು. ಈ ಮೂವರಿಗೆ ಯಾರ ಜೊತೆ ಸಂಪರ್ಕವಿದೆ ಎಂಬ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದರು

ಈ ಮೂವರು ಕೆನಡಾಕ್ಕೆ ಬಂದು ಮೂರು ನಾಲ್ಕು ವರ್ಷಗಳಾಗಿವೆ. ಭಾರತ ಸರ್ಕಾರದ ಜೊತೆ ಇವರಿಗೆ ಯಾವ ರೀತಿಯ್ ಸಂಬಂಧ ಇದೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.

Author

error: