ಹಾರ್ದಿಕ್ ಪಾಂಡ್ಯಗೆ ಫೀಟ್ ನೆಸ್ ಸಮಸ್ಯೆ ; ಮುಂದಿನ ಪಂದ್ಯಗಳಿಗೆ ರೆಸ್ಟ್ ?

Hardik Pandya Fitness : ಹಾರ್ದಿಕ್ ಪಾಂಡ್ಯ ಫಿಟ್ ನೆಸ್ ಬಗ್ಗೆ ನೂರಕ್ಕೆ ನೂರರಷ್ಟೂ ಫಿಟ್ ಆಗಿದ್ದಾರೆ ಎಂದು ಅನ್ನಿಸುವುದಿಲ್ಲ ಎಂದಿದ್ದಾರೆ

ಮುಂಬೈ : ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ ಪಾಂಡ್ಯ ಲಕ್ ಯಾಕೋ ಕೈ ಕೊಡ್ತಿದೆ. ಗುಜರಾತ್ ತಂಡದ ನಾಯಕನಾಗಿದ್ದಾಗ ಎಲ್ಲ ಸರಿ ಇತ್ತು. ಯಾವಾಹ ರೋಹಿತ್ ಶರ್ಮ ಜಾಗಕ್ಕೆ ಬಂದು ಕುಳಿತರೋ ಲಕ್ ಕೈ ಕೊಡ್ತಾ ಇದೆ.

ನಿನ್ನೆ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಒವರ್ ಮಾಡಿದವರು ಹಾರ್ದಿಕ ಪಾಂಡ್ಯ. ಈ ಕೊನೆಯ ಓವರ್ ನಲ್ಲಿ ಅವರು ಕೊಟ್ಟಿದ್ದು 20 ರನ್ ಗಳು. ದೋನಿ ಈ ಓವರ್ ನಲ್ಲಿ ಮೂರು ಸಿಕ್ಸರ್ ಚಚ್ಚಿಬಿಟ್ಟರು. ಪಂದ್ಯದ ಗತಿಯನ್ನು ಬದಲಿಸಿ ಬಿಟ್ಟರು.

ಇದಾದ ಮೇಲೆ ಚರ್ಚೆ ಪ್ರಾರಂಭವಾಗಿದ್ದು ಹಾರ್ದಿಕ್ ಪಾಂಡ್ಯ ಫಿಟ್ ನೆಸ್ ಬಗ್ಗೆ ನೂರಕ್ಕೆ ನೂರರಷ್ಟೂ ಫಿಟ್ ಆಗಿದ್ದಾರೆ ಎಂದು ಅನ್ನಿಸುವುದಿಲ್ಲ ಎಂದಿದ್ದಾರೆ ಆಸ್ಟ್ರ‍ೇಲಿಯಾದ ಲಿಜೆಂಡರಿ ವಿಕೆಟ್ ಕೀಪರ್ ಆಡಂ ಗಿಲ್ ಕ್ರಿಸ್ಟ್​
ಹಾಗೆ ಸುನಿಲ್ ಗವಾಸ್ಕರ್ ಕೂಡ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ.

ಹೀಗಾಗಿ ಹಾರ್ದಿಕ್ ಗೆ ರೆಸ್ಟ್ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ಪಂದ್ಯಗಳಿಗೆ ಹಾರ್ದಿಕ್ ಗೆ ರೆಸ್ಟ್ ಕೊಡುವ ಬಗ್ಗೆ ತಂಡದ ಆಡಳಿತ ತೀರ್ಮಾನ ಕೈಗೊಳ್ಳಬೇಕಾಗಿದೆ.

Author

error: