ಸತತ ಮೂರು ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವು -ಸೋತು ದೇವರ ಮೊರೆ ಹೋಗಿದ್ದ ಹಾರ್ದಿಕ್ ಗೆ ಸಂತೋಷವೋ ಸಂತೋಷ..

ಮುಂಬೈ : ಸತತ ಮೂರು ಸೋಲು. ತಂಡದ ಒಳಗೆ ಗುಂಪುಗಾರಿಕೆ. ಗೆಲುವು ಗಾವುದ ಗಾವುದ ದೂರ. ಇದು ಮುಂಬೈ ಇಂಡಿಯನ್ಸ್ ತಂಡದ ದಯನೀಯ ಸ್ಥಿತಿ ಆಗಿತ್ತು. ಹೊಸದಾಗಿ ನಾಯಕತ್ವ ಒಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಕೊನೆಯದಾಗಿ ದೇವರ ಮೊರೆ ಹೋಗಿದ್ದರು.. ಆದರೆ ಇವತ್ತಿನ ದಿನ ಬದಲಾಗಿತ್ತು. ಅವರ ಲಕ್ ಕೈಕೊಡಲಿಲ್ಲ. ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 29 ರನ್ ಗಳಿಂದ ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡೆಲ್ಲಿ ತಂಡ ಎಂಟು ವಿಕೆಟ್‌ಗೆ 205 ರನ್ ಗಳಿಸಲಷ್ಟೇ ಸಾಧ್ಯವಾಯಿತು. 29 ರನ್ ಗಳಿಂದ ಸೋಲು.

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಕಳಪೆ ಪ್ರದರ್ಶನ ನೀಡಿತ್ತು.

ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 49, ಇಶಾನ್ ಕಿಶನ್ 42, ಹಾರ್ದಿಕ್ ಪಾಂಡ್ಯ 39, ಟಿಮ್ ಡೇವಿಡ್ ಅಜೇಯ 45 ರನ್ ಹಾಗೂ ರೊಮಾರಿಯೋ ಶೆಫರ್ಡ್ ಅಜೇಯ 39 ರನ್ ಬಾರಿಸಿದರು. ತಂಡಕ್ಕೆ ಗೆಲ್ಲುವ ಸ್ಕೋರ್ ಇದಾಗಿತ್ತು.. ಡೆಲ್ಲಿ ಪರ ಅಕ್ಷರ್ ಪಟೇಲ್ ಮತ್ತು ಅನ್ರಿಚ್ ನಾರ್ಟ್ಜೆ ತಲಾ 2 ವಿಕೆಟ್ ಪಡೆದರು.

ಡೆಲ್ಲಿ ಪರ ಪೃಥ್ವಿ ಶಾ 66, ಅಭಿಶೇಕ್ ಪೊರೆಲ್ 41, ಟ್ರಿಸ್ಟಾನ್ ಸ್ಟಬ್ಸ್ ಅಜೇಯ 71 ರನ್ ಹೊಡೆದರು. ಜೆರಾಲ್ಡ್ ಕೋಟ್ಜಿ 4 ವಿಕೆಟ್ ಹಾಗೂ ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

Author

error: