ಬಾಲಿವುಡ್ : ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮನೆ ಎದುರು ಗುಂಡು ಹಾರಿಸಿದ ವ್ಯಕ್ತಿ ಪತ್ತೆಯಾಗಿದೆ, ಈತ ಹರಿಯಾಣದ ಗುರುಗ್ರಾಮದ ಗ್ಯಾಂಗ್ ಸ್ಟರ್ ಎಂದು ಪೋಲಿಸರು ತಿಳಿಸಿದ್ದಾರೆ.
ಸಲ್ಮಾನ್ ಮನೆಯ ಎದುರು ಮೋಟರ್ ಬೈಕ್ ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿದ್ದರು. ಇವರಲ್ಲಿ ಒಬ್ಬನ ಹೆಸರು ವಿಶಾಲ್. ಈತ ಸಲ್ಮಾನ್ ಮನೆಯ ಮುಂದೆ ಗುಂಡು ಹಾರಿಸಿದ್ದ. ಈತ ಒಬ್ಬ ಕ್ರಿಮಿನಲ್. ಅವನ ಮೇಲೆ ಐದಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ.
ಈ ವಿಶಾಲ್ ರೋಹಿತ್ ಗ್ಯಾಂಗ ಸ್ಟರ್ ರೋಹಿತ್ ಗೊದಾರಾ ಗುಂಪಿಗೆ ಸೇರಿದವನಾಗಿದ್ದಾನೆ. ಈತ ಲಾರೆನ್ಸ್ ಬಿಷ್ಣೋಯಿ ಜೊತೆಗಾರ ಎಂದು ಪೋಲಿಸರು ತಿಳಿಸಿದ್ದಾರೆ,
ಈ ಘಟನೆಯ ನಂತರ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ ಮೋಲ್ ಬಿಷ್ಣೋಯ್ ಈ ಘಟನೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದ.






