ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
Future Generali India: ಮಹಿಳೆಯರ-ನೇತೃತ್ವದಲ್ಲಿ ಮಾರಾಟ ವಿತರಣಾ ಡಿಜಿಟಲ್ ಚಾನೆಲ್ ಆರಂಭ
Future Generali India: ನೇಮಕ ಗೊಂಡವರಿಗೆ ಜೀವ ವಿಮಾ ಉದ್ಯಮದ ಸಮಗ್ರ ಜ್ಞಾನನೀಡಿ ಸಜ್ಜುಗೊಳಿಸುತ್ತದೆ. ಜೊತೆಗೆ, ಈ ಚಾನಲ್ ಮಹಿಳಾ ತಂಡವೊಂದನ್ನು ಸಿದ್ಧಗೊಳಿಸಿದೆ.
ಮುಂಬೈ: ಫ್ಯೂಚರ್ ಜನರಲ್ ಇಂಡಿಯಾ ಲೈಫ್ ಇನ್ಶುರೆನ್ಸ್ ಕಂಪನಿಯು ‘ವುಮೆನ್ ಇನ್ ಇನ್ಶುರೆನ್ಸ್’ (ವಿನ್) ಎಂಬ ಹೊಸ ಮಹಿಳಾ ನೇತೃತ್ವದ ಮಾರಾಟ ವಿತರಣಾ ಡಿಜಿಟಲ್ ಚಾನಲ್ ಪ್ರಾರಂಭಿಸಿದೆ. ಇದರ ಗುರಿ, ಜೀವ ವಿಮಾ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡುವುದಾಗಿದೆ.
ಭಾರತದ ಇಂಟರ್ನೆಟ್ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಬ್ರ್ಯಾಂಡ್‌ಗಳ ಜೊತೆ ಸಕ್ರಿಯವಾಗಿ ತೊಡಗಿಕೊಳ್ಳುವುದನ್ನು ಗುರುತಿಸಿರುವ ಫ್ಯೂಚರ್ ಜನರಲ್ ಇಂಡಿಯಾ ಲೈಫ್ ಇನ್ಶುರೆನ್ಸ್ ತನ್ನ ವಿನ್ ಮಾರಾಟ ಚಾನಲ್ ಮೂಲಕ ಡಿಜಿಟಲ್ ಮೀಡಿಯಾ ಪ್ಲಾಟ್ ಫಾರ್ಮ್‌ಗಳಲ್ಲಿನ ಅವಕಾಶಗಳನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.
ಮೆಟ್ರೋ ಅಲ್ಲದ ನಗರಗಳಲ್ಲಿ ಎಂಬಿಎ ಕಾಲೇಜುಗಳ ಯುವ ಪ್ರತಿಭೆಗಳನ್ನು ಗುರಿಯಾಗಿಸಿಕೊಂಡು, ಈ ಚಾನೆಲ್ ವಿಶೇಷವಾದ ‘ಕ್ಯಾಂಪಸ್ ಟು ಕಾರ್ಪೊರೇಟ್’ ತರಬೇತಿ ನೀಡುತ್ತದೆ. ನೇಮಕಗೊಂಡವರಿಗೆ ಜೀವ ವಿಮಾ ಉದ್ಯಮದ ಸಮಗ್ರ ಜ್ಞಾನ ನೀಡಿ ಸಜ್ಜುಗೊಳಿಸುತ್ತದೆ. ಜೊತೆಗೆ, ಈ ಚಾನಲ್ ಮಹಿಳಾ ತಂಡವೊಂದನ್ನು ಸಿದ್ಧಗೊಳಿಸಿದೆ.
ಇವರಲ್ಲಿ ಪ್ರತಿಯೊಬ್ಬರೂ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಂಡುಅವರಿಗೆ ಬೇಕಾಗುವಂತಹ ಉತ್ಪನ್ನದ ಬಗ್ಗೆ ಮಾರ್ಗದರ್ಶನ ನೀಡಲು ಮತ್ತು ಕಂಪನಿಯ ಡಿಜಿಟಲ್ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಲು ಕೆಲಸ ಮಾಡುತ್ತಾರೆ. ಮುಂದೆ ಈ ಯುವ ಮಹಿಳಾ ನಾಯಕರು ಡಿಜಿಟಲ್ ವೇದಿಕೆಗಳ ಮೂಲಕ ವಿಮೆಯ ಬಗ್ಗೆ ಅರಿವನ್ನು ಹೆಚ್ಚಿಸುತ್ತಾರೆ.

ಈ ಮಾರಾಟದ ಚಾನೆಲ್‌ನ ಪ್ರಾರಂಭದೊಂದಿಗೆ, ಫ್ಯೂಚರ್ ಜನರಲ್ ಇಂಡಿಯಾ ಲೈಫ್ ಇನ್ಶುರೆನ್ಸ್ ಬದಲಾದ ಜೀವ ವಿಮಾ ಉದ್ಯಮವನ್ನು ಮುನ್ನಡೆಸಲು ಯುವ ಮಹಿಳಾ ನಾಯಕರನ್ನು ಸಬಲಗೊಳಿಸುತ್ತಿದೆ.
