ನವದೆಹಲಿ : ದೇಶದ ಚಿತ್ತ ನೆಟ್ಟಿದ್ದ ದೆಹಲಿ ಚುನಾವಣೆಯ ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಘೋಷಿಸಿದೆ. ಫೆಬ್ರವರಿ 5 ರಂದು 70 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಚುನಾವಣೆಯ ಫಲಿತಾಂಶ. ಹೊರ ಬೀಳಲಿದೆ.
ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸುಮಾರು 62 ಕ್ಷೇತ್ರ ಗೆದ್ದು ಅಧಿಕಾರದ ಗದ್ದುಗೆಗೇರಿತ್ತು. ಬಿಜೆಪಿ ಉಳಿದ 8 ಕ್ಷೇತ್ರಗಳಲ್ಲಿ ಮಾತ್ರ ತನ್ನದಾಗಿಸಿಕೊಂಡಿತ್ತು. ಅತ್ತ ಕಾಂಗ್ರೆಸ್ ಒಂದೇ ಒಂದು ಸ್ಥಾನಗಳಿಸಲು ಸಾಧ್ಯವಾಗದೇ ತೀವ್ರ ಮುಖಭಂಗ ಅನುಭವಿಸಿತ್ತು. ಈ ಬಾರಿ ಲಿಕ್ಕರ್ ಹಗರಣ ಸೇರಿ ಹಲವು ಆರೋಪಗಳು ಆಮ್ ಆದ್ಮಿ ಪಕ್ಷದ ಮೇಲಿದ್ದು, ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಬಾರಿ ಅದರ ಲಾಭ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಸಜ್ಜಾಗಿವೆ. ಆದರೆ, ಇದರಾಚೆಯೂ ಕೂಡ ಆಪ್ ಮತ್ತೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ.
ಈ ಚುನಾವಣೆ ಆಪ್ಗೆ ಮಗ್ಗಲು ಮುಳ್ಳಾಗಿ ಕಾಡಲಿದೆಯಾ ಅಥವಾ ಕಳೆದ ಬಾರಿಯಂತೆಯೇ ಈ ಬಾರಿಯೂ ಕೂಡ ಭರ್ಜರಿ ಬಹುಮತ ಪಡೆಯಲಿದೆಯಾ ಅನ್ನೋದು ಫೆಬ್ರವರಿ 8 ರಂದು ಗೊತ್ತಗಲಿದೆ.







