ಅನನ್ಯ ಕಲಾವಿದ ಹಾಸ್ಯ ನಟ ಉಮೇಶ್ ಇನ್ನಿಲ್ಲ – ಶ್ರದ್ಧಾಂಜಲಿ (22/2/1945 – 30/11/2025)

ಬೆಂಗಳೂರು, ನವೆಂಬರ್ ೩೦: ಅದೊಂದು ಮುಖ. ಆ ಮುಖವನ್ನು ಕಣ್ಣೆದುರು ತಂದರೆ ಸಾಕು ನಗು ಹಾಗೇ ಮೂಡುತ್ತದೆ. ಅವರ ಮಾತಿಗಿಂತ ಮೊದಲು ಅವರ ದೇಹಭಾಷೆ, ಆಂಗಿಕ ಅಭಿನಯ ಮೊದಲು ನಗುವನ್ನು ತರುತ್ತಿತ್ತು. ಅಂತಹ ಒಬ್ಬ ಹಾಸ್ಯ ನಟ ಉಮೇಶ್. ತಮ್ಮ ಸುದೀರ್ಘ ನಟನಾ ಪಯಣವನ್ನು ಕೊನೆಗೊಳಿಸಿದ್ದಾರೆ. ೮೦ ವರ್ಷಗಳ ತುಂಬು ಜೀವನ ಸಾಗಿಸಿ ಇದೀಗ ಬಾರದ…










