Life Insurance: ಜೀವ ವಿಮೆ ನಿಮಗೆಷ್ಟು ಗೊತ್ತು?

Life Insurance : ಎಲ್ ಐ ಸಿಯಲ್ಲಿ ಉಳಿತಾಯ, ಅಪಾಯ ನಿರ್ವಹಣೆ ಮತ್ತು ನಿವೃತ್ತಿಯೋಜನೆಗೆ ಸಂಬಂಧಿಸಿದ ವಿಶೇಷ ಪಾಲಿಸಿಗಳಿವೆ. ಅವುಗಳಿಂದ ನಿಮ್ಮ ಬದುಕು ಸಾಲವಿಲ್ಲದೆ ಆರಾಮವಾಗಿ ಸಾಗುತ್ತದೆ. ಯಾರಿಗೂ ತಲೆ ಬಾಗದೆ ಎಂದೆಂದಿಗೂ ಸಾಲಗಾರರಾಗದೆ ನೆಮ್ಮದಿಯಿಂದ ನಿದ್ದೆ ಮಾಡುತ್ತೀರಿ

ಜೀವವಿಮೆಯಲ್ಲಿ ಟರ್ಮ್ ಅಥವಾ ಅವಧಿ ವಿಮೆ ಹೊರತಾಗಿ ಬಹಳಷ್ಟು ಬೇರೆ ವಿಮೆಗಳಿವೆ. ಅವುಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

* ಜೀವ ವಿಮೆಯ ಜೊತೆಗೆ ಉಳಿತಾಯ – ಈ ಪಾಲಿಸಿಗಳಲ್ಲಿ ಅಂಚೆ ಕಚೇರಿ/ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವ ಹಾಗೆ ಒಮ್ಮೆಲೆ ಹೂಡಿಕೆ ಮಾಡಬಹುದು. ಅಥವಾ ಒಟ್ಟಿಗೆ ದೊಡ್ಡ ಮೊತ್ತ ಇಲ್ಲ ಎಂದರೆ ಪ್ರತಿತಿಂಗಳು/ ಮೂರು/ ಅರ್ಧವಾರ್ಷಿಕ/ ವಾರ್ಷಿಕ ಕಂತುಗಳಲ್ಲಿ ಕೂಡಿಡಬಹುದು. ಈ ಮೊತ್ತಕ್ಕೆ ಎಲ್ ಐಸಿಯು ಆಯಾ ಪಾಲಿಸಿಗಳ ಅವಕಾಶಗಳ ಪ್ರಕಾರ ಶೇ.6 ರಿಂದ ಶೇ.10 ರವರೆಗಿನ ಬಡ್ಡಿದರದಲ್ಲಿ ಹಣ ಸೇರಿಸಿ ಕಾಲ ಬಂದಾಗ ಪಾಲಿಸಿದಾರರಿಗೆ ಕೊಡುತ್ತದೆ. ಜೀವನದಲ್ಲಿ ಯಾರ ಮೇಲೂ ಭಾರ ಹಾಕಲಾರೆ ಎನ್ನುವವರು ಈ ಪಾಲಿಸಿಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ.

* ಬಡ್ಡಿ ಆದಾಯ – ಇದು ಸಾಮಾನ್ಯವಾಗಿ ಒಮ್ಮೆಲೆ ಕಟ್ಟುವ ಎಫ್.ಡಿ ತರಹ ಇರುತ್ತದೆ. ನೀವು ಈ ವಿಮೆಯಲ್ಲಿ ಹೂಡಿಕೆ ಮಾಡಿದರೆ ನೀವು ಎಷ್ಟು ವರ್ಷಗಳ ಕಾಲ ಅಸಲು ಹಣವನ್ನು ಖಾತೆಯಲ್ಲಿ ಬಿಡುತ್ತೀರೋ ಅಷ್ಟು ವರ್ಷಗಳ ನಂತರ ದೊಡ್ಡ ಪ್ರಮಾಣದ ಬಡ್ಡಿ ಸೇರಿಕೊಳ್ಳುತ್ತದೆ. ಆ ಬಡ್ಡಿಯನ್ನು ನೀವು ನಿಮ್ಮ ನಿವೃತ್ತಿ/ ನಿಮ್ಮ ನಂತರದವರ ಜೀವನ ಖರ್ಚಿಗೆ ಉಪಯೋಗಿಸಬಹುದು. ಈ ವಿಮೆಗಳಲ್ಲಿ ಶೇ.೬ ರಿಂದ ಶೇ.೧೩ರವರೆಗೆ ಗಳಿಸುವ ಅವಕಾಶವಿರುತ್ತದೆ.

* ಜೀವನದಲ್ಲಿ ಪ್ರತಿ ೫ ವರ್ಷಗಳಿಗೊಮ್ಮೆ ಘಟಿಸುವ ಮಹತ್ತರವಾದ ಕೆಲಸಗಳಿಗೆ ಹಣ ಹೊಂದಾಣಿಕೆ – ಈ ವಿಮೆಗಳಲ್ಲಿ ನೀವು ಪ್ರತಿತಿಂಗಳು/ಮೂರು ತಿಂಗಳು/ಅರ್ಧವಾರ್ಷಿಕ/ವಾರ್ಷಿಕ ಕಂತುಗಳಲ್ಲಿ ಹಣ ಕಟ್ಟುತ್ತಾ ಹೋಗುತ್ತೀರಿ. ಪ್ರತಿ 5 ವರ್ಷಗಳಿಗೊಮ್ಮೆ ನಿಮ್ಮ ವಿಮಾ ಕಂಪನಿಯು ನಿಮ್ಮ ಖಾತೆಗೆ ಒಂದು ದೊಡ್ಡ ಮೊತ್ತವನ್ನು ಜಮಾ ಮಾಡುತ್ತದೆ. ಆ ಹಣದಿಂದ ನೀವು ನಿಮಗೆ ಅಗತ್ಯವಿರುವ ಕಾರು, ಮನೆ ಅಲಂಕಾರಿಕ ವಸ್ತುಗಳು, ಒಡವೆ ಇಂತಹವುಗಳನ್ನು ಖರೀದಿಸಬಹುದು. ಮಕ್ಕಳ ಕಾಲೇಜು ಶುಲ್ಕವನ್ನು ಕಟ್ಟಬಹುದು. ಮದುವೆಗಾಗಿ ಸಾಲ ಮಾಡುವುದು ಕಡಿಮೆ ಆಗುತ್ತದೆ. ವಿದೇಶ ಪ್ರವಾಸವನ್ನು ಮಾಡಬಹುದು.

* ಕಂಪನಿಗಳಲ್ಲಿ ಹೂಡಿಕೆ – ಇವತ್ತು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ದೊಡ್ಡ ವಿಷಯವಾಗಿದೆ. ದೊಡ್ಡ ಮೊತ್ತದ ಬಡ್ಡಿ ಆಸೆಗೆ ಜನರು ಹೂಡಿಕೆ ಶುರು ಮಾಡುತ್ತಾರೆ. ಆದರೆ ಒಂದೆರಡು ವರ್ಷಗಳಲ್ಲಿ ಯಾವುದಾದರೂ ಕಾರಣಕ್ಕೆ ಆ ಮೊತ್ತವನ್ನು ಹಿಂಪಡೆಯುತ್ತಾರೆ. ಇಲ್ಲಿ ಹಣ ಹೆಚ್ಚಾಗಲೂ ಬಹುದು. ಇದ್ದಿದ್ದೂ ಹೋಗಬಹುದು. ಹೂಡಿಕೆದಾರನಿಗೆ ಏನಾದರೂ ಆಪತ್ತು ಬಂದರೆ ಆ ಕುಟುಂಬಕ್ಕೆ ದೇವರೇ ದಿಕ್ಕು. ಈ ಅಪಾಯವನ್ನು ಪರಿಗಣಿಸಿ ಬಾರತ ಸರಕಾರ ಸ್ವಾಮ್ಯದ ಎಲ್ಐಸಿಯು ಮ್ಯೂಚುವಲ್ ಫಂಡ್ ಮತ್ತು ಅಪಾಯ ನಿರ್ವಹಣೆ ಸೇರಿಸಿ ವಿಮೆ ನೀಡುತ್ತದೆ. ಇಲ್ಲಿ ನಿಮ್ಮ್ಮ ಹಣಕ್ಕೆ ದೊಡ್ಡ ಮೊತ್ತದ ಬಡ್ಡಿಯನ್ನು ಕೊಡುತ್ತದೆ. ಜೊತೆಗೆ ನಿಮಗೇನಾದರೂ ಆದರೆ ಮೊತ್ತಕ್ಕೆ ಅನುಗುಣವಾಗಿ ನಿಮ್ಮನ್ನು ನಂಬಿದವರ ಜವಾಬ್ದಾರಿಯನ್ನು ಹೊರುತ್ತದೆ.

* ನಿವೃತ್ತಿ ಯೋಜನೆ – 2021ರ ನಂತರ ಸರಕಾರಿ ನೌಕರರಿಗೆ ಹಳೆಯ ನಿವೃತ್ತಿ ಹಣ ಬರುವ ಯೋಜನೆ ಇಲ್ಲ. ಸಂಬಳದಲ್ಲಿ ಶೇ.೧೦ರಷ್ಟನ್ನು ನಿವೃತ್ತಿಯ ನಂತರ ಸೇರಿಸಿ ಕೊಡುವ ಹೊಸ ನಿವೃತ್ತಿ ಯೋಜನೆ ಇದೆ. ಇಂತಹ ಸಂದರ್ಭದಲ್ಲಿ ಖಾಸಗಿಯವರೂ ಸೇರಿದಂತೆ ಸರಕಾರಿ ನೌಕರರು ನಿವೃತ್ತಿಯ ನಂತರದ ಜೀವನಕ್ಕೆ ಹಣ ಉಳಿಸಿಕೊಳ್ಳಬೇಕಾಗುತ್ತದೆ. ಒಂದು ಸ್ವಂತ ಮನೆ ಇದ್ದು , ತಿಂಗಳಿಗೋ/ಮೂರು ತಿಂಗಳಿಗೋ/ಅರ್ಧ ವರ್ಷಕ್ಕೊ/ವಾರ್ಷಿಕವೋ ಆದಾಯ ಬರುವಂತಹ ಆಯ್ಕೆಗಳಿದ್ದರೆ ಎಷ್ಟು ಚೆನ್ನ ಅಲ್ಲವೆ? ಇದನ್ನು ಸಹ ಗಮನದಲ್ಲಿಟ್ಟುಕೊಂಡು ಎಲ್ ಐ ಸಿ ಯೋಜನೆಗಳನ್ನು ತಂದಿದೆ. ಖಾಸಗಿ ಕಂಪನಿಗಳ ವಿಮೆಗಳಲ್ಲಿ ನೀವು ಕೇವಲ 70 ವರ್ಷಗಳು ಮಾತ್ರ ಜೀವಿಸುತ್ತೀರಿ ಎಂದು ಭಾವಿಸಲಾಗುತ್ತದೆ. ಆದರೆ ಸರಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು ತನ್ನ ಗ್ರಾಹಕರು 100 ವರ್ಷಗಳ ಕಾಲ ಜೀವಿಸುತ್ತಾರೆ, ಅವರಿಗೆ ಯಾವುದೇ ತೊಂದರೆಗಳಾಗದಿರಲಿ ಎಂದು ಭಾವಿಸುತ್ತದೆ. ಅದಕ್ಕಾಗಿ ವಿಶೇಷವಾದ, ಅತ್ಯುಕೃಷ್ಟ ಯೋಜನೆಗಳನ್ನು ಹೊಂದಿದೆ.

ಜೀವ ವಿಮೆ ಎಂದ ಕೂಡಲೇ ಓಡಿಹೋಗುವ ಅಗತ್ಯವಿಲ್ಲ. ಕಂತುಗಳನ್ನು ಸರಿಯಾಗಿ ಕಟ್ಟದಿದ್ದರೆ ಪಾಲಿಸಿ ಹೋಗುವುದಿಲ್ಲ. ಮೊದಲ ಎರಡು ವರ್ಷಗಳು ಕಟ್ಟಿ ಮುಗಿಸಿದರೆ ನಂತರ ಆ ಪಾಲಿಸಿಯನ್ನು ಕಂಪನಿಗೆ ಒಪ್ಪಿಸಬಹುದು. ಹಾಗೆ ಒಪ್ಪಿಸಿ/ಸರೆಂಡರ್ ಮಾಡಿದಾಗ ಕಂಪನಿಯು ಅಲ್ಲಿಯವರೆಗೆ ತಗುಲಿದ ಪಾಲಿಸಿ ನಿರ್ವಹಣೆಯ ವೆಚ್ಚವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ನಿಮಗೆ ನೀಡುತ್ತದೆ. ಆದರೆ ನೆನಪಿರಲಿ, ನೀವು ಪಾಲಿಸಿಯನ್ನು ಒಪ್ಪಿಸುವವರೆಗೆ ನಿಮ್ಮ ಅನಿರೀಕ್ಷಿತ ಅಪಾಯಕ್ಕೆ ಸುರಕ್ಷತೆ ಇರುತ್ತದೆ. ನಿಮಗೇನಾದರೂ ಸಂಭವಿಸಿದರೆ ನಿಮ್ಮ ಮನೆಯವರು, ಸಾಲ ಕೊಟ್ಟವರು ನಿಮಗೆ ಹಿಡಿಶಾಪ ಹಾಕುವುದಿಲ್ಲ. ಬದಲಿಗೆ ನಿಮ್ಮನ್ನು ಜೀವನಪರ್ಯಂತ ನೆನೆಸಿಕೊಳ್ಳುವ, ಹನಿಗಣ್ಣಾಗುವ ಅವಕಾಶವಿರುತ್ತದೆ. ಆದ್ದರಿಂದ ಪಾಲಿಸಿ ಒಪ್ಪಿಸುವುದು ಕೊನೆಯ ಆಯ್ಕೆಯಾಗಿರಬೇಕು.

ಸಾಲವನ್ನು ತೆಗೆದುಕೊಳ್ಳುವಾಗ ಹಾಲೋಗರ ಉಂಡಂತೆ, ಸಾಲಗಾರರು ಬಂದು ಪೀಡಿಸುವಾಗ ಹೊನ್ನ ಶೂಲವಂತೆ. ಸಾಲ ಮಾಡಿ ಕಾರು, ಮನೆ, ಮಕ್ಕಳ ಶಿಕ್ಷಣ, ಅವರ ಮದುವೆ, ನಿಮ್ಮ ನಿವೃತ್ತಿ ಬದುಕು ಸಾಗುವುದಕ್ಕಿಂತ ಸಾಲ ಮಾಡದೆ ಆಯಾ ಕಾಲಕ್ಕೆ ಹಣ ಸಿಗುವಂತೆ ಮಾಡಿಕೊಳ್ಳುವುದು ಜಾಣತನ. ಈ ಜಾಣತನ ಇದ್ದವರು ಸೂಕ್ತವಾದ ಮೊತ್ತದ ಜೀವವಿಮೆ ಪಾಲಿಸಿಯನ್ನು ಎಲ್ ಐಸಿಯಿಂದ ಕೊಂಡುಕೊಳ್ಳುತ್ತಾರೆ.

ಎಲ್ ಐಸಿಯೂ ಸೇರಿದಂತೆ ಖಾಸಗಿ ಸಂಸ್ಥೆಗಳು, ಬ್ಯಾಂಕುಗಳು ಜೀವ ವಿಮೆಯ ಜೊತೆಗೆ ಉಳಿತಾಯ, ಬಡ್ಡಿ ಆದಾಯದ ಅವಕಾಶವನ್ನು ನೀಡುತ್ತವೆ. ಅವುಗಳಲ್ಲಿ ನೀವು ನಿಮ್ಮ ಹಣವನ್ನು ಉಳಿಸಿದ್ದಕ್ಕೆ ನಿಮಗೆ ಖಚಿತವಾಗಿ ಶೇ.೬ ರಿಂದ 8 ರ ಬಡ್ಡಿದರದಲ್ಲಿ ಬಡ್ಡಿ ದೊರೆಯುತ್ತದೆ. ಮ್ಯೂಚುವಲ್ ಫಂಡ್, ಬಂಗಾರ ಮತ್ತು ಸ್ಥಿರಾಸ್ಥಿಗಳಿಗಿಂತ ಇದು ನಿಮಗೆ ಕಡಿಮೆ ಆದಾಯ ಎನ್ನಬಹುದು. ಆದರೆ ಅವುಗಳಲ್ಲಿ ಅಪಾಯ ಜಾಸ್ತಿ. ಎಲ್ಲಿ ದೊಡ್ಡ ಮೊತ್ತದ ರಿಟರ್ನ್ಸ್ ಇರುತ್ತದೊ ಅಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಎಲ್ಲಿ ನಿಧಾನವಾಗಿಯಾದರೂ ಸರಿ , ಸ್ಥಿರವಾದ ಬೆಳವಣಿಗೆ ಇರುತ್ತದೋ ಅಲ್ಲಿ ಹಣವನ್ನು ಅದರ ಬಡ್ಡಿ ಸಮೇತ ಒಟ್ಟಿಗೆ ಪಡೆಯುವ ಭರವಸೆ ಇರುತ್ತದೆ. ಅದರಲ್ಲೂ ಸರ್ಕಾರಿ ಸಂಸ್ಥೆಯಾದರಂತೂ ನಿಮ್ಮ ಹಣಕ್ಕೆ ದೊಡ್ಡ ಭರವಸೆ ಇರುತ್ತದೆ. ಬೆವರು ಸುರಿಸಿ ಕಷ್ಟಪಟ್ಟು ದುಡಿದ ಹಣ ಎಲ್ಲೋ ದುರಾಸೆಗೆ ಹಾಳಾಗಲಿ ಎಂದು ಬಯಸುತ್ತೀರಾ?

ಎಲ್ ಐ ಸಿಯಲ್ಲಿ ಉಳಿತಾಯ, ಅಪಾಯ ನಿರ್ವಹಣೆ ಮತ್ತು ನಿವೃತ್ತಿಯೋಜನೆಗೆ ಸಂಬಂಧಿಸಿದ ವಿಶೇಷ ಪಾಲಿಸಿಗಳಿವೆ. ಅವುಗಳಿಂದ ನಿಮ್ಮ ಬದುಕು ಸಾಲವಿಲ್ಲದೆ ಆರಾಮವಾಗಿ ಸಾಗುತ್ತದೆ. ಯಾರಿಗೂ ತಲೆ ಬಾಗದೆ ಎಂದೆಂದಿಗೂ ಸಾಲಗಾರರಾಗದೆ ನೆಮ್ಮದಿಯಿಂದ ನಿದ್ದೆ ಮಾಡುತ್ತೀರಿ.

See insights and ads

ಪೋಸ್ಟ್ ಪ್ರಚಾರ ಮಾಡಿ · Promote post

Author

error: