ಲುಂಗಿ ಹಾಕ್ಕೊಂಡು ನಮ್ ಮುಖ್ಯಮಂತ್ರಿಗಳೇ ರಾಜ್ಯವನ್ನಾಳ್ತಾರೆ ಅಂದ್ಮೇಲೆ ಮಾಲ್ದೇನ್ರಿ: ಸಚಿವ ಸಂತೋಷ್ ಲಾಡ್

Karnataka Labour Minister Santosh: ನಮ್ಮ ಅನ್ನದಾತ ಲುಂಗಿ ಹಾಕೋತಾನೆ ಇಂತವರಿಗೆ ಬಿಡಲಿಲ್ಲ ಅಂದ್ರೇ ಹೇಗೆ? ಮಾಲ್ ಕಡ್ಡಾಯವಾಗಿ ಪತ್ರ ಬರೆಯುತ್ತೇವೆ.

ಬೆಂಗಳೂರು: ನಮ್ಮ ಸಿಎಂ ಸಿದ್ದರಾಮಯ್ಯನವರೇ ಲುಂಗಿ ಹಾಕಿಕೊಂಡು ರಾಜ್ಯವನ್ನು ಆಳುತ್ತಾರೆ ಅಂದಮೇಲೆ ಲುಂಗಿ ಹಾಕಿಕೊಂಡು ಮಾಲ್ ಗೆ ಹೋಗುವುದರಲ್ಲಿ ತಪ್ಪೇನು ? ಎಂದು ಖಡಕ್ ಆಗಿ ಪ್ರಶ್ನಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಪಂಚೆ ಹಾಕಿಕೊಂಡು ಹೋದವರಿಗೆ ಅವಮಾನ ಮಾಡಿದವರು ಯಾರೇ ಆಗಲಿ ಅವರ ವಿರುದ್ಧ ಮಾಲ್​ ನವರು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿ.ಟಿ.ಮಾಲ್ ಒಳಗೆ ಲುಂಗಿ ಹಾಕಿಕೊಂಡವರಿಗೆ ಬಿಟ್ಟಿಲ್ಲ ಎಂಬುದು ಗೊತ್ತಾಗಿದೆ. ಇಂತಹ ಮನಸ್ಥಿತಿಯನ್ನ ತಗೆಯಬೇಕು ಇಂಥ ಯೋಚನೆ ಇರಬಾರದು ಎಂದು ಆಕ್ರೊಶ ವ್ಯಕ್ತಪಡಿಸಿದರು.

ನಮ್ಮ ಅನ್ನದಾತ ಲುಂಗಿ ಹಾಕೋತಾನೆ ಇಂತವರಿಗೆ ಬಿಡಲಿಲ್ಲ ಅಂದ್ರೇ ಹೇಗೆ? ಮಾಲ್ ಕಡ್ಡಾಯವಾಗಿ ಪತ್ರ ಬರೆಯುತ್ತೇವೆ. ನಮ್ಮ ಇಲಾಖೆಯಿಂದ ಇಲ್ಲಾಂದ್ರೆ ಗೃಹ ಇಲಾಖೆಯಿಂದ ಪತ್ರ ಬರೆಯುತ್ತೇವೆ ಇಂತಹ ಮನಸ್ಥಿತಿ ಇರುವವರು ಯಾರೇ ಇರಲಿ, ಅಂತವರನ್ನು ಕೆಲಸದಿಂದ ತಗೆಯಬೇಕು ಎಂದಿದ್ದಾರೆ.

Author

error: