ಅನ್ಯ ದೇಶದ ಪ್ರಜೆಗಳನ್ನು ಧ್ವೇಷಿಸುವ ರಾಷ್ಟ್ರ‍ಗಳಲ್ಲಿ ಭಾರತವೂ ಒಂದು: ಬೈಡನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆ ನಕಾರ

US President Joe Biden : ಅನ್ಯ ದೇಶದ ಪ್ರಜೆಗಳನ್ನು ಧ್ವೇಷಿಸುವ ರಾಷ್ಟ್ರ‍ಗಳಲ್ಲಿ ಭಾರತವೂ ಒಂದು ಎಂಬ ಬೈಡನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆ ನಕಾರ

ನವದೆಹಲಿ : ಭಾರತ, ಚೀನಾ, ರಷ್ಯಾ ಮತ್ತು ಜಪಾನ ಅನ್ಯದೇಶದ ಪ್ರಜೆಗಳನ್ನು ಧ್ವೇಷಿಸುವ ದೇಶಗಳು ಎಂಬ ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಹೇಳಿಕೆಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆದರೆ ಈ ಬಗ್ಗೆ ವಿಶ್ವಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ದವಿಲ್ಲ.

ಬೈಡನ್ ಏನು ಹೇಳಿಕೆ ನೀಡಿದ್ದಾರೋ ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಹೇಳಿದ್ದಾರೆ.

ಅಮೇರಿಕ ಅಧ್ಯಕ್ಷ ಜೋ ಬೈಡನ್ ಈಗ ಎರಡು ದಿನಗಳ ಹಿಂದೆ ಮಾತನಾಡುವಾಗ ಈ ಮಾತು ಹೇಳಿದ್ದರು. ಭಾರತ, ರಷ್ಯಾ ಚೀನಾ ಮತ್ತು ಜಪಾನ್ ವಲಸೆ ಬಂದವರನ್ನು ಸುಲಭವಾಗಿ ಬಿಡುವುದಿಲ್ಲ. ಈ ವಿಚಾರದಲ್ಲಿ ಅಮೇರಿಕದಂತೆ ಈ ದೇಶಗಳು ಇಲ್ಲ ಎಂದು ಟೀಕಿಸಿದ್ದರು.

Author

error: