ವಿಶ್ವ ಕಪ್ ತಂಡದಿಂದ ರಿಂಕೂ ಸಿಂಗ್ ಹೊರಗಿಟ್ಟಿದ್ದಕ್ಕೆ ಭಾರಿ ವಿರೋಧ. ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗರು.
ಅಮೇರಿಕದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವ ಕಪ್ ಗೆ ಬಾರತ ತಂಡದ ಆಯ್ಕೆಯಾಗಿ ಒಂದು ದಿನ ಕಳೆದಿದೆ. ಈಗಾಗಲೇ ಆಯ್ಕೆ ಸಮಿತಿಯ ಮೇಲೆ ವಾಗ್ದಾಳಿ ಪ್ರಾರಂಭವಾಗಿದೆ. ಈ ತಂಡವನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಕ್ರಿಕೆಟಿಗರು ಪ್ರಶ್ನಿಸುತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಖಾಂತ್ ಆಯ್ಕೆ ಸಮಿತಿಯನ್ನು ಜಾಡಿಸಿದ್ದು ಮಾತ್ರವಲ್ಲ, ರಿಂಕೂ ಸಿಂಗ್ ಅವರನ್ನು ಕೈಬಿಟ್ಟಿದ್ದಕ್ಕೆ ಅಸಮಾಧಾನವನ್ನು ಹೊರಹಾಕಿದ್ದಾರೆ. ರಿಂಕೂ ಸಿಂಗ್ ಅವರ ಆಟ ಮತ್ತು ಸಾಧನೆಯನ್ನು ನೋಡಿ ಅವರನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. ರಿಂಕೂ ಸಿಂಗ್ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರೀಂಕೂ ಸಿಂಗ್ ಮುಖ್ಯ ತಂಡದ ಭಾಗವಾಗಬೇಕಿತ್ತು ಎಂದು ಅವರು ಹೇಳಿದ್ದಾರೆ.
ರಿಂಕೂ ಸಿಂಗ್ ಅವರನ್ನು ತಂಡಕ್ಕೆ ತೆಗೆದುಕೊಂಡು ಯಶಸ್ವಿ ಜೈಸ್ವಲ್ ಅವರನ್ನು ಬಿಟ್ಟಿದ್ದರೂ ನಾನು ಅದನ್ನು ಒಪ್ಪಿಕೊಳ್ಳುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.
ತಂಡದ ವಿಕೆಟ್ ಕೀಪರ್ ಸ್ಥಾನಕ್ಕೆ ಕೆ.ಎಲ್. ರಾಹುಲ್ ಅವರನ್ನು ತೆಗೆದುಕೊಳ್ಳಬೇಕಿತ್ತು.ಅವರ ದಾಖಲೆಗಳನ್ನು ಗಮನಿಸಿದರೆ ಈಗ ಆಯ್ಕೆಯಾಗಿರುವ ಸಂಜೂ ಸ್ಯಾಮ್ಸನ್ ಮತ್ತು ರುಶಬ್ ಪಂತ್ ಅವರಿಗಿಂತ ಚೆನ್ನಾಗಿದ್ದರು ಎಂಬ ಟೀಕೆಯೂ ಕೇಳಿ ಬರುತ್ತಿದೆ.
