ಅಮೇರಿಕದಲ್ಲಿ ನಡೆಯುವ ಟಿ ೨೦ ವಿಶ್ವಕಪ್ ನ ಭಾರತ ತಂಡವನ್ನು ಪ್ರಕಟಿಸಿಲಾಗಿದೆ. ಈ ತಂಡದಲ್ಲಿ ಹೇಳುವಂತ ಆಚ್ಚರಿಯ ಆಯ್ಕೆ ಇಲ್ಲ. ಹಾರ್ಧಿಕ ಪಾಂಡ್ಯ ಉಪ ನಾಯಕರಾಗಿರುವುದು ವಿಶೇಷ. ಹಾಗೆ ಬಹಳ ಕಾಲದ ಕಾಯುವಿಕೆಯ ನಂತರ ಸಂಜೂ ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹಿರಿಯ ಆಟಗಾರ ವಿರಾಟ್ ಕೊಯ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಿವಂ ದುಬೆ ತಂಡದಲ್ಲಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ತಂಡದಲ್ಲಿ ಇಲ್ಲ. ಆದರೆ ಶುಭಮನ್ ಗಿಲ್ ಮತ್ತು ರಿಂಕು ಸಿಂಗ್ ರಿಸರ್ವ್ ನಲ್ಲಿ ಇದ್ದಾರೆ.
ರೋಹಿತ್ ಶರ್ಮ ಈ ೧೫ ಆಟಗಾರರ ತಂಡದ ನಾಯಕತ್ವ ಒಹಿಸಲಿದ್ದಾರೆ.
ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿರಾಟ್ ಕೊಯ್ಲಿ ಜೊತೆ ಆರಂಭಿಕ ಆಟಗಾರರಾಗಿರುತ್ತಾರೆ. ಹಾಗೆ ಋಷಬ್ ಪಂತ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು ನಿರೀಕ್ಷಿತ.

ಹಾರ್ದಿಕ ಪಾಂದ್ಯ ಈ ಬಾರಿ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂಬ ವದಂತಿ ದಟ್ಟವಾಗಿತ್ತು. ಹಾರ್ದಿಕ್ ಫಾರ್ಮ್ ನಲ್ಲಿ ಇಲ್ಲದಿರುವುದು ಇದಕ್ಕೆ ಕಾರಣ. ಆದರೆ ಆಯ್ಕೆದಾರರು ಪಾಂಡ್ಯ ಮೇಲೆ ನಮ್ಭಿಕೆ ಇಟ್ಟು ಅವರನ್ನುಉಪ ನಾಯಕರನ್ನಾಗಿ ಮಾಡಿದ್ದಾರೆ. ರೋಹ್ಗಿತ್ ಜೊತೆ ಇವರ ಹೊಂದಾಣಿಕೆ ಹೇಗಿರುತ್ತದೆ ನೋಡಬೇಕು
ತಂಡ ಹೀಗಿದೆ
ರೋಹಿತ್ ಶರ್ಮಾ, ನಾಯಕ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಶ್ಃಅಭ್ ಪಂತ್, ಸಂಜೂ ಸ್ಯಾಮ್ಸನ್, ಹಾರ್ದಿಕ ಪಾಂಡ್ಯ, ಉಪನಾಯಕ, ಶಿವಂ ದುಬೆ, ರವೀಂದ್ರ ಜಡೆಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್

ಮೀಸಲು; ಶುಭಮನ್ ಗಿಲ್, ರಿಂಕೂ ಸಿಂಗ್, ಖಲಿಳ್ ಅಹಮ್ಮದ್ ಮತ್ತು ಅವೇಶ್ ಖಾನ್

Author

Leave a Reply

Your email address will not be published. Required fields are marked *