ಮೇರಿಕದಲ್ಲಿ ನಡೆಯಲಿರುವ ಟಿ ೨೦ ವಿಶ್ವಕಪ್ ಆಯ್ಕೆ ಸಮಿತಿ ಸಭೆ ಇಂದು ನಡೆಯಲಿದೆ. ಅಹಮದಾಬಾದ್ ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತ ತಂಡದ ಆಯ್ಕೆ ನಡೆಯಲಿದೆ.
ಅಂತಿಮವಾಗಿ ೧೫ ಸದಸ್ಯರ ತಂಡದ ಆಯ್ಕೆಯಾಗಲಿದೆ. ಯಾರು ಈ ೧೫ ಆಟಗಾರರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ ಇಂದು ನಡೆಯಲಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಆಟಗಾರರ ಆಯ್ಕೆಯಾಗಲಿದ್ದು ಮೇ೧ ರ್ಂದು ತಂಡವನ್ನು ಪ್ರಕಟಿಸಲಾಗುವುದು.

ತಂಡದ ಆಯ್ಕೆಯಲ್ಲಿ ಬಹುಮುಖ್ಯ ಚರ್ಚೆ ನಡೆಯುವುದು ವಿಕೆಟ್ ಕೀಪರ್ ಕುರಿತು ಎಂದು ಹೇಳಲಾಗುತ್ತಿದೆ. ಹಲವು ಹೆಸರುಗಳು ಈ ಸ್ಥಾನಕ್ಕಾಗಿ ಕೇಳಿಬರುತ್ತಿದೆ.
ಈ ಬಾರಿಯಾದರೂ ಅದ್ಬೂತ ಪ್ರದರ್ಶನ ನೀಡುತ್ತಿರುವ ಸಂಜೂ ಸ್ಯಾಮ್ಸನ್ ಗೆ ಅವಕಾಶ ಸಿಗಬಹುದೇ ಎಂಬುದು ಕೇಳಿ ಬರುತ್ತಿರುವ ಪ್ರಶ್ನೆ. ಸಂಜೂ ಅಭಿಮಾನಿಗಳಿಗಂತೂ ಪ್ರತಿ ಸಲ ನಿರಾಶೆಯಾಗುತ್ತಲೇ ಇದೆ.
ಇನ್ನೂ ಹಾರ್ದಿಕ ಪಾಂಡ್ಯ ಫಾರ್ಮ್ ನಲ್ಲಿ ಇಲ್ಲ. ಆದ್ದರಿಂದ ಅವರಿಗೆ ಅವಕಾಶ ತಪ್ಪಬಹುದು. ಹಾರ್ದಿಕ್ ಐ ಪಿ ಎಲ್ ನ ೯ ಪಂದ್ಯಗಳಲ್ಲಿ ಗಳಿಸಿದ್ದು ೧೯೭ ರನ್ ಗಳು ಮಾತ್ರ. ಅವರ ಸರಾಸರಿ ರನ್ ಪ್ರಮಾಣ ೨೪.೬೩. ಸ್ಟ್ರೈ ಕ್ ರೇಟ್ ೧೫೧.೫೩.
ಇದನ್ನೆಲ್ಲ ಗಮನಿಸಿದರೆ ಹಾರ್ದಿಕ ಪಾಂಡ್ಯ ಈ ಬಾರಿ ವಿಶ್ವಕಪ್ ಆಡುವ ಅವಕಾಶವನ್ನು ಕಳೆದುಕೊಳ್ಳಬಹುದು.

Author

Leave a Reply

Your email address will not be published. Required fields are marked *