ಖಾಲಿಸ್ಥಾನಿ ಪ್ರತ್ಯೇಕತಾವಾದಿ ಪನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಉತ್ತರದಾಯಿತ್ವವನ್ನೇ ಅಮೇರಿಕ ಪ್ರಶ್ನೆ ಮಾಡಿದೆ. ಇದು ಭಾರತ ಮತ್ತು ಅಮೇರಿಕ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟು ಸೃಷ್ಟಿಸಲೂ ಬಹುದು.
ಅಮೇರಿಕ ಮತ್ತು ಕೆನಡಾ ಪ್ರಜೆಯಾಗಿರುವ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಯ ಯತ್ನಕ್ಕೆ ಸಂಬಂಧಿಸಿದಂತೆ ಅಮೇರಿಕದ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಭಾರತದ ಗುಪ್ತಚರ
ಸಂಸ್ಥೆ ರಾ ದತ್ತ ಬೊಟ್ಟು ಮಾಡುತ್ತಿವೆ. ಈ ವರದಿಗಳಲ್ಲಿ ಭಾರತ ಅಲ್ಲಗಳೆಯುತ್ತಿದೆ.
ಈಗ ಅಮೇರಿಕೆ ಪ್ರತಿಕ್ರಿಯೆ ನೀಡಿದ್ದು ಭಾರತದ ಉತ್ತರದಾಯಿತ್ವ ಅಥವಾ ಎಕೌಂಟಾಬಿಲಿಟಿ ಕುರಿತು ಮಾತನಾಡುತ್ತಿರುವುದು ಗಂಭೀರ ವಿಚಾರ.
ಅಮೇರಿಕದ ಪತ್ರಿಕೆಗಳಲ್ಲಿ ಬಂದ ವರದಿ ಮತ್ತು ರಾ ಅಧಿಕಾರಿಯೊಬ್ಬರು ಈ ಹತ್ಯೆ ಯೋಜನೆ ರೂಪಿಸಿದ್ದರು ಎಂಬ ವರದಿಯನ್ನು ಭಾರತ ಅಲ್ಲಗಳೆದ ಮೇಲೆ ಅಮೇರಿಕ ನಿನ್ನೆ ಪ್ರತಿಕ್ರಿಯೆ ನೀಡಿತು.
ಯುಎಸ್ ಸ್ಟೇಟ್ ಡಿಪಾರ್ಟಮೆಂಟ್ ನ ಪ್ರಿನ್ಸಿಪಲ್ ಡೆಪ್ಯೂಟಿ ವಕ್ತಾರ ವೇದಾಂತ್ ಪಟೇಲ್ ನಿನ್ನೆ ಪ್ರತಿಕ್ರ್ರಿಯೆ ನೀಡಿ ಭಾರತ ಸರ್ಕಾರದಿಂದ ನಾವು ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತೇವೆ. ಈ ಬಗ್ಗೆ ಭಾರತದ ಜೊತೆ ನಾವು ಸತತ ಸಂಪರ್ಕದಲ್ಲಿದ್ದೇವೆ ಎಂದರು.,
ಈ ವಿಚಾರದಲ್ಲಿ ನಮ್ಮ ಕಳವಳವನ್ನು ನಾವು ವ್ಯಕ್ತಪಡಿಸುತ್ತಲೇ ಇರುತ್ತೇವೆ. ಭಾರತ ಸರ್ಕಾರದ ಉನ್ನತ ಮಟ್ಟದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ. ಇನ್ನೂ ಮುಂದುವರಿದರೆ ಡಿಪಾರ್ಟಮೆಂಟ್ ಆಫ್ ಜಸ್ಟೀಸ್ ಗೆ ಈ ವಿಷಯವನ್ನು ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.
“
