ಬಿಜೆಪಿ ಅಂದರೆ ಬಾಯಿ ಬಡುಕತನ. ಮಾತಿನ ಮೂಲಕ ಮನೆ ಕಟ್ಟುವವರು. ಮಾತಿನ ಮೂಲಕವೇ ಅಂಗೈಯಲ್ಲಿ ಅರಮನೆ ತೋರಿಸುವವರು. ಸತ್ಯದ ಎದೆಯ ಮೇಲೆ ಒದ್ದ ಹಾಗೆ ಸುಳ್ಳು ಹೇಳ ಬಲ್ಲವರು
ಇಂತಹ ಬಿಜೆಪಿಯನ್ನ ಒಂದೇ ಹೊಡೆತದಲ್ಲಿ ಬಾಯಿ ಮುಚ್ಚಿಸಿದವರು ಪ್ರಜ್ವಲ್ ರೇವಣ್ಣ. ಈ ಕೆಲಸ ಬೇರೆ ಯಾರಿಗೂ ಸಾಧ್ಯ ಇರಲಿಲ್ಲ.
ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಇವರು ಹೇಗೆ ಬಳಸಿಕೊಂಡರು ನೋಡಿ. ಒಂದು ಸಾಮಾನ್ಯ ಪ್ರೇಮ ಪ್ರಕರಣವನ್ನು ಕೋಮು ಸಂಘರ್ಷದ ಅಂಗಳವನ್ನಾಗಿ ಮಾರ್ಪಡಿಸಲು ಯತ್ನಿಸಿದರು. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಲೇವಡಿ ಮಾಡಿದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಆರ್ಥಿಕತೆ ದಿವಾಳಿಯಾಗುತ್ತದೆ ಎಂದು ಪ್ರಚಾರ ಮಾಡಿದರು. ಒಳ್ಳೆಯ ಕೆಲಸ ಮಾಡಿಯೂ ಉತ್ತರ ನೀಡಲಾಗದ ಸ್ಥಿತಿಗೆ ಕಾಂಗ್ರೆಸ್ ಸರ್ಕಾರವನ್ನು ತಳ್ಳಿ ಬಿಟ್ಟರು.
ಇವರ ಜೊತೆ ಸೇರಿಕೊಂಡ ಕುಮಾರಸ್ವಾಮಿ ಕಾಂಗ್ರೆಸ್ ಏನು ಮಾಡಿದರೂ ತಪ್ಪು ಎನ್ನುವ ಸ್ಥಿತಿಯನ್ನು ನಿರ್ಮಿಸಿಬಿಟ್ಟರು..
ಕಾಂಗ್ರೆಸ್ ಬಾಯಿ ಕಟ್ಟು ಹೋಗಿತ್ತು.
ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ನೆರವಿಗೆ ಬಂದವರು ಪ್ರಜ್ವಲ್ ರೇವಣ್ಣ. ಅವರ ಪೆನ್ ಡ್ರೈವ್ ದೇಶಾದ್ಯಂತ ಸಂಚಲನವನ್ನು ಮೂಡಿಸಿ ಬಿಟ್ಟಿತು. ಬಾಯಿ ಬಡುಕ ಬಿಜೆಪಿ ನಾಯಕರು ಹಿಂಬಾಗಿಲಿನಿಂದ ಒಡಿ ಹೋಗುವಂತೆ ಮಾಡಿದರು.
ನನ್ನ ಮಗ ನಿಖಿಲ್ ಮತ್ತು ಪ್ರಜ್ವಲ್ ರೇವಣ್ಣ ಬೇರೆಯಲ್ಲ ಎಂದು ನಾಲ್ಕು ದಿನಗಳ ಹಿಂದೆ ಹೇಳಿದ್ದ ಕುಮಾರಣ್ಣ, ನಮ್ಮದು ಒಂದೇ ಕುಟುಂಬ ಅಲ್ಲ. ನಾವು ಬೇರೆ ಬೇರೆ ಎಂದು ಸಮಜಾಯಿಷಿ ನೀಡಿ ಕೈತೊಳೆದುಕೊಳ್ಳಲು ಯತ್ನಿಸಿದರು.
ಪೆನ್ ಡ್ರೈವ್ ಹಿಡಿದು ಕಾಂಗ್ರೆಸ್ ಅನ್ನು ಹೆದರಿಸುತ್ತಿದ್ದ ಕುಮಾರಣ್ಣ ತನ್ನ ಅಣ್ಣನ ಮಗನ ಪೆನ್ ಡ್ರೈವ್ ನಿಂದ ಮುಳುಗುವ ಸ್ಥಿತಿ ಬಂತು..
