ನವದೆಹಲಿ : ಅಮೇರಿಕ ಬಿಡುಗಡೆ ಮಾಡಿರುವ ಮಾನವ ಹಕ್ಕುಗಳ ವರದಿ ಏಕಪಕ್ಷೀಯವಾಗಿದೆ ಎಂದು ಭಾರತ ತೀವ್ರ ಪ್ರತಿಕ್ರಿಯೆ ನೀಡಿದೆ. ಈ ವರದಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ, ನೋ ವಾಲ್ಯು ಎಂದು ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದೆ.
ಅಮೇರಿಕ ಬಿಡುಗಡೆ ಮಾಡಿರುವ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರದ ಹಿಂಸಾಚಾರ ಮತ್ತು ಖಲಿಸ್ತಾನಿ ಉಗ್ರಗಾಮಿ ಹರದೀಪ್ ಸೀಮ್ಗ್ ನಿಜ್ಜರ್ ಹತ್ಯೆಯನ್ನು ಪ್ರಸ್ತಾಪಿಸಲಾಗಿತ್ತು.
ಅಮೇರಿಕ ತನ್ನ ವರದಿಯಲ್ಲಿ ಹಲವು ಪ್ರಮುಖ ವಿಚಾರಗಳ ಪ್ರಸ್ತಾಪ ಮಾಡಿತ್ತು. ಮಣಿಪುರದ ಹಿಂಸಾಚಾರ, ಬಿಬಿಸಿ ಮೇಲೆ ತೆರಿಗೆ ದಾಳಿ. ವಿದೇಶಿ ನೆಲದಲ್ಲಿ ಖಾಲಿಸ್ತಾನಿ ಉಗ್ರರ ಹತ್ಯೆ ಮೊದಲಾದ ವಿಚಾರಗಳು ಈ ವರದಿಯಲ್ಲಿ ಪ್ರಸ್ತಾಪವಾಗಿದ್ದವು.
ಅಮೇರಿಕದ ಸ್ಟೇಟ್ ಡಿಪಾರ್ಟಮೆಂಟ್ ಬಿಡುಗಡೆ ಮಾಡಿರುವ ಈ ವರದಿ ಏಕಪಕ್ಷೀಯವಾಗಿದೆ. ಭಾರತ ಈ ವರದಿಗೆ ಯಾವ ಬೆಲೆಯನ್ನೂ ಕೊಡುವುದಿಲ್ಲ ಎಂದು ನಮ್ಮ ವಿದೇಶಾಂಗ ಇಲಾಖೆ ತಿಳಿಸಿದೆ.







