ನವದೆಹಲಿ:ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಲೋಕಸಭೆಗೆ ಸ್ಪರ್ಧಿಸದೇ ಇರುವುದು ಅಪರಾಧವೆ ? ಈ ವಿಚಾರವನ್ನು ಬಳಸಿಕೊಂಡು ಟೀಕಿಸುವುದು ಸಂಸ್ಕೃತಿಯೆ ? ಇವತ್ತು ಈ ಪ್ರಶ್ನೆ ಕೇಳುವಂತಾಯಿತು. ಇದಕ್ಕೆ ಕಾರಣ ದೇಶದ ಪ್ರಧಾನ ಮಂತ್ರಿ ನೀಡಿರುವ ಹೇಳಿಕೆ. ಯಾರು ಲೋಕಸಭೆಗೆ ಸ್ಪರ್ಧಿಸಿ ಗೆಲ್ಲಲಾರರೋ ಅವರು ರಾಜ್ಯಸಭೆ ಸದಸ್ಯರಾಗುತ್ತಾರೆ ಇದು ಪ್ರಧಾನಿ ಮೋದಿ ಅವರು ಮಾಡಿರುವ ಟೀಕೆ.
ತಮ್ಮ ಭಾಷಣದಲ್ಲಿ ಸೋನಿಯಾ ಗಾಂಧಿ ಅವರ ಹೆಸರನ್ನು ಮೋದಿ ಹೇಳಲಿಲ್ಲ. ಬದಲಾಗಿ ಇನ್ನೊಬ್ಬ ನಾಯಕರು ರಾಜಸ್ಥಾನದಿಂದ ರಾಜ್ಯಸಭೆಗೆ ಹೋದರು ಎಂದು ಟೀಕಿಸಿದರು. ಅವರ ಗುರಿ ಶ್ರೀಮತಿ ಸೋನಿಯಾ ಗಾಂಧಿ ಅವರಾಗಿತ್ತು. ಅವರು ರಾಜ್ಯಸಭೆಗೆ ಹೋದ ಇನ್ನೊಬ್ಬ ನಾಯಕರನ್ನು ಹೆಸರಿಸಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರದಾಗಿತ್ತು,
ನೀವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಾಜ್ಯ ಸಭೆಗೆ ಕಳುಹಿಸಿ ಕೊಟ್ಟಿರಿ. ಅವರು ಮತ್ತೆ ರಾಜ್ಯದಲ್ಲಿ ಕಾಣಿಸಲೇ ಇಲ್ಲ. ಈಗ ಮತ್ತೊಬ್ಬರನ್ನು ಕಳುಹಿಸಿಕೊಡುತ್ತಿದ್ದೀರಿ ಎಂದು ಮೋದಿ ಟೀಕಿಸಿದರು
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮತ್ತು ಪರಿವಾರವಾದವನ್ನು ಎಲ್ಲೆಡೆ ಹರಡುತ್ತದೆ ಎಂದು ಮೋದಿ ಟೀಕಿಸಿದರು. ಆದರೆ ತಾವು ಮತ್ತು ತಮ್ಮ ಪಕ್ಷ ಏನು ಮಾಡುತ್ತಿದೆ ಎಂಬ್ಉದು ಜನರಿಗೆ ತಿಳಿದಿಲ್ಲ ಎಂದು ಅವರು ನಂಬಿದಂತಿತ್ತು.
