ಮಹಾರಾಷ್ಟ್ರ ಬಿಜೆಪಿ ಮಿತ್ರ ಪಕ್ಷಗಳ ಸೀಟು ಹಂಚಿಕೆ ಇನ್ನೂ ಇಲ್ಲ: 6 ಸ್ಥಾನಗಳು ಕಗ್ಗಂಟು

Maharashtra Politics : ಮೂಲಗಳ ಪ್ರಕಾರ ದಕ್ಷಿಣ ಮುಂಬೈ, ಥಾಣೆ, ಪಲ್ಘಾರ್, ರತ್ನಗಿರಿ ಸಿಂಧುದುರ್ಗ, ನಾಸಿಕ್ ಮತ್ತು ಔರಂಗಾಬಾದ್ ಕ್ಷೇತ್ರಗಳು ಸಮಸ್ಯೆ ತಂದಿಟ್ಟಿವೆ.

ಮುಂಬೈ : ಮಹಾವಿಕಾಸ್ ಅಗಾಡಿಯ ಲಗಾಡಿ ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿ ಈಗ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಕಗ್ಗಂಟಿನಲ್ಲಿ ಸಿಲುಕಿಕೊಂಡಿದೆ.

ಬಿಜೆಪಿ ಜೊತೆಗೆ ಶಿವಸೇನೆ, ಎನ್ ಸಿ ಪಿ ತುಂಡುಗಳನ್ನು ಇಟ್ಟುಕೊಂಡು ಸರ್ಕಾರ ನಡೆಸಲಾಗುತ್ತಿದೆ . ಈ ತುಂಡುಗಳಿಗೆ ಈಗ ಟಿಕೆಟ್ ಹಂಚುವುದೇ ಸಮಸ್ಯೆಯಾಗಿದೆ. ಮೂಲಗಳ ಪ್ರಕಾರ ದಕ್ಷಿಣ ಮುಂಬೈ, ಥಾಣೆ, ಪಲ್ಘಾರ್, ರತ್ನಗಿರಿ ಸಿಂಧುದುರ್ಗ, ನಾಸಿಕ್ ಮತ್ತು ಔರಂಗಾಬಾದ್ ಕ್ಷೇತ್ರಗಳು ಸಮಸ್ಯೆ ತಂದಿಟ್ಟಿವೆ.

ಮೊದಲ ಹಂತದ ಚುನಾವಣೆ ನಡೆಯಲು ಇನ್ನಿರುವುದು ನಾಲ್ಕೇ ದಿನ. ಆದರೂ ಈ ಸ್ಥಾನಗಳಲ್ಲಿ ಯಾವ ಟಿಕೆಟ್ ಯಾರಿಗೆ ಎಂಬುದು ಅಂತಿಮವಾಗಿಲ್ಲ. ನಾಸಿಕ್ ಸೀಟು ತಮಗೆ ಬೇಕು ಎಂದು ಎನ್ ಸಿ ಪಿ ಯ ಅಜಿತ್ ಪವಾರ್ ಬಣ ಪಟ್ಟು ಹಿಡಿದಿದೆ.

ಇಲ್ಲಿಂದ ಜಗನ್ ಬುಜಬಲ್ ಅವರನ್ನು ನಿಲ್ಲಿಸುವುದು ಅಜಿತ್ ಪವಾರ್ ಯೋಚನೆ. ಆದರೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇದಕ್ಕೆ ಒಪ್ಪುತ್ತಿಲ್ಲ. ಹೀಗೆ ಉಳಿದ 5 ಕ್ಷೇತ್ರಗಳಲ್ಲೂ ಇದೇ ಸಮಸ್ಯೆಯಾಗಿದೆ.

Author

Leave a Reply

Your email address will not be published. Required fields are marked *