ಕಂಗನಾಗೆ ಸೆಡ್ಡು ಹೊಡೆಯಲಿರುವ ವಿಕ್ರಮಾದಿತ್ಯ ಸಿಂಗ್ ; ಕಾಂಗ್ರೆಸ್ ಪಟ್ಟಿ ಬಿಡುಗಡೆ

Vikramaditya Singh v/s Kangana Ranaut: ಬಿಜೆಪಿ ಅಭ್ಯರ್ಥಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ವಿಕ್ರಮಾದಿತ್ಯ ಸಿಂಗ್ ಪೈಪೋಟಿ ನಡೆಸಲಿದ್ದಾರೆ.

ನವದೆಹಲಿ : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ 16 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿತು. ಈ ಪಟ್ಟಿಯ ಮಹತ್ವದ ಹೆಸರು ಎಂದರೆ ಹಿಮಾಚಲ ಪ್ರದೇಶದ ಮಂಡಿಯಿಂದ ವಿಕ್ರಮಾದಿತ್ಯ ಸಿಂಗ್ ಅವರನ್ನು ಕಣಕ್ಕೆ ಇಳಿಸಿದ್ದು, ವಿಕ್ರಮಾದಿತ್ಯ ಸಿಂಗ್ ಹಾಲಿ ಸಂಸ್ದೆ ಪ್ರತಿಭಾ ಸಿಂಗ್ ಅವರ ಪುತ್ರ.

ಇಲ್ಲಿ ಬಿಜೆಪಿ ಅಭ್ಯರ್ಥಿ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ವಿಕ್ರಮಾದಿತ್ಯ ಸಿಂಗ್ ಪೈಪೋಟಿ ನಡೆಸಲಿದ್ದಾರೆ. ಚಂಡೀಗಢದಿಂದ ಮನೀಶ್ ತಿವಾರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿನ ಹಾಲಿ ಸಂಸದ ಕಿರಣ್ ಖೇರ್ ಬದಲಿಗೆ ಸಂಜಯ್ ಟಂಡನ್ ಗೆ ಬಿಜೆಪಿ ಟಿಕೆಟ್ ನೀಡಿದೆ.

ರಾಜ್‌ಕೋಟ್ ಲೋಕಸಭಾ ಕ್ಷೇತ್ರದಿಂದ ಪರೇಶ್‌ಭಾಯ್ ಧನಾನಿ, ನವಸಾರಿಯಿಂದ ನೈಶಾದ್ ದೇಸಾಯಿ, ಶಿಮ್ಲಾದಿಂದ ವಿನೋದ್ ಸುಲ್ತಾನ್‌ಪುರಿ ಸೇರಿದಂತೆ 16 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಘೋಷಿಸಿದೆ.
ಕಾಂಗ್ರೆಸ್ ಇದರೊಂದಿಗೆ ಇದರೊಂದಿಗೆ ಒಟ್ಟು 259 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಶನಿವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ದೆಹಲಿಯ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಯಿತು.

Author

error: