ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಹೊಸೂರಿನ ಕಟ್ಟಡ ನಿರ್ಮಾಣದ ಮೇಸ್ತ್ರಿ ಕೆಲಸ ಮಾಡುವ ವಿನಾಯಕ ಮತ್ತು ಪದ್ಮಾವತಿ ನಾಯ್ಕ ದಂಪತಿಯ ಮಗಳು ಕುಮಾರಿ ರಕ್ಷಿತಾ ವಿನಾಯಕ ನಾಯ್ಕ ಇವಳು ಬಡತನವನ್ನೇ ಸವಾಲಾಗಿ ಸ್ವೀಕರಿಸಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 590/600 (98.20%) ಅಂಕ ಗಳಿಸಿ ಅದ್ವಿತೀಯವಾದ ಸಾಧನೆ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ತಂದೆ ವಿನಾಯಕ ನಾಯ್ಕ ಅವರು ಹಲವು ವರ್ಷಗಳಿಂದ ಕಟ್ಟಡ ನಿರ್ಮಾಣದ ಕಾರ್ಮಿಕನಾಗಿದ್ದಾರೆ. ಇತ್ತೀಚೆಗೆ ಆಕಸ್ಮಿಕ ರಸ್ತೆ ಅಪಘಾತದಲ್ಲಿ ಪ್ರೀತಿಯ ಅಜ್ಜಿಯನ್ನು ಕಳೆದುಕೊಂಡು ತುಂಬಾ ನೊಂದಿದ್ದಳು.
ಅಲ್ಲದೇ ಅದೇ ಅಪಘಾತದಲ್ಲಿ ತಂದೆ , ಅತ್ತೆ ಸಹ ಗಾಯಗೊಂಡಿದ್ದರು. ಇದೀಗ ಆರೋಗ್ಯ ಚೇತರಿಕೊಳ್ಳುವ ಸಂದರ್ಭದಲ್ಲಿ ಮಗಳ ಅತ್ಯುತ್ತಮ ಫಲಿತಾಂಶ ಹೆತ್ತವರ ಮೊಗದಲ್ಲಿ ಸಂತಸ ತಂದಿದೆ.
ಸಧ್ಯಕ್ಕೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಪೂರ್ವ ಪರೀಕ್ಷೆಯ(NEET) ತರಬೇತಿಯನ್ನು ಪಡೆಯುತ್ತಿರುವ ರಕ್ಷಿತಾ ವೈದ್ಯೆಯಾಗುವ ಕನಸು ಹೊತ್ತಿದ್ದಾಳೆ.
